

ಸಿರಗುಪ್ಪ: ಪ್ರತಿಯೊಬ್ಬರೂ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡಲ್ಲಿ ಸ್ವಚ್ಛ, ನಿರ್ಮಲವಾದ ಸಮಾಜ ನಿರ್ಮಾಣ ಮಾಡಲು ಸಹಾಯಕವಾಗಲಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.
ಡಾ.ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನದ ಅಂಗವಾಗಿ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಸಿದ್ದಗಂಗಾಶ್ರೀ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕಿನಿಂದ ಆಯೋಜಿಸಿದ್ದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ್ಪಾರ್ಚನೆ ಮಾಡಿ ಮಾತನಾಡಿದರು.
ದೇಶ ಮತ್ತು ಸಮಾಜದ ಪ್ರಗತಿ ಬಗ್ಗೆ ಕಳಕಳಿ ಹೊಂದಿದ್ದ ಸಿದ್ದಗಂಗಾ ಶ್ರೀಗಳು ಮುಂದಿನ ಪೀಳಿಗೆಯ ಪ್ರಗತಿಗಾಗಿ ಪಣತೊಟ್ಟಿದ್ದರು. ಎಷ್ಟೋ ಗಣ್ಯರ ಬಾಲ್ಯ ಜೀವನದಲ್ಲಿ ಪರಿವರ್ತನೆಗೆ ಶ್ರೀಗಳು ಕಾರಣರಾಗಿದ್ದಾರೆ. ಲಕ್ಷಾಂತರ ಮಕ್ಕಳಿಗೆ ಆಶ್ರಯ, ಅನ್ನ ,ಅಕ್ಷರ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಪಾಗಿಟ್ಟಿದ್ದರು ಎಂದು ಚೊಕ್ಕಬಸವನಗೌಡ ತಿಳಿಸಿದರು.
ಬ್ಯಾಂಕಿನ ಅಧ್ಯಕ್ಷ ಎಂ.ವರಶಂಕರ, ಉಪಾಧ್ಯಕ್ಷೆ ಪದ್ಮಾವತಿ ಕೃಷ್ಣಾರೆಡ್ಡಿ, ನಿರ್ದೇಶಕರಾದ ಚೊಕ್ಕ ಪಾಲಾಕ್ಷಿಗೌಡ, ಎಂ.ವೀರೇಶ ಸ್ವಾಮಿ, ಪಿ.ಶರಣಬಸಪ್ಪ, ಮಲ್ಲಿಕಾರ್ಜುನಗೌಡ, ಪಟ್ಟಣಶೆಟ್ಟಿ ವೀರೇಶ, ಪಿ.ಸದಾಶಿವ, ರತನ್, ಮಮತಾ ಪ್ರಶಾಂತ್, ವಿನುತ ಕರಿಬಸವರಾಜ, ಎಚ್.ಶಿಲ್ಪಾ ಬಸವರಾಜ, ಉಮಾದೇವಿ ನಾರಾಯಣಶೆಟ್ಟಿ ಇದ್ದರು.