ಉತ್ತಮ ಸಂಸ್ಕಾರವನ್ನು ಬಿತ್ತಿದವರು ಶಿವಶರಣರು

2ark-4
ಅರಕಲಗೂಡು ತಾಲೂಕಿನ ಕೆಸವತ್ತೂರು ಸಿದ್ದಲಿಂಗೇಶ್ವರ ಮಠದಲ್ಲಿ ಆಯೋಜಿಸಿದ್ದ 5ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಕುಮಾರಸ್ವಾಮಿ, ಸೋಮಶೇಖರ್ ಇದ್ದರು.
Published on

ಅರಕಲಗೂಡು: ತಾಲೂಕಿನ ಕೆಸವತ್ತೂರು ಶ್ರೀ ಸಿದ್ದಲಿಂಗೇಶ್ವರ ಮಠದಲ್ಲಿ ಅಕ್ಕನ ಬಳಗ ಮಹಿಳಾ ವೇದಿಕೆ, ಸಿದ್ದಲಿಂಗೇಶ್ವರ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಂಗಳವಾರ 5ನೇ ಹುಣ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಶಿವಶರಣರು ವಚನಗಳನ್ನು ರಚಿಸಿ ಉತ್ತಮ ಸಂಸ್ಕಾರಗಳನ್ನು ಬಿತ್ತುವ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದರು. ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದ ಶರಣೆ ಅಕ್ಕಮಹಾದೇವಿ ಅವರು ಸಮಾಜಕ್ಕೆ ಬೆಳಕಾಗಿದ್ದರು ಎಂದು ಹೇಳಿದರು.


ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರ ಹಾಗೂ ಬಸವಣ್ಣನ ವಚನಗಳಲ್ಲಿರುವ ಶಕ್ತಿ ಅಪಾರವಾದದ್ದು. ಈ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮುಕ್ತಿ ಸಿಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.


ಸಾಹಿತಿ ಸೀಬಹಳ್ಳಿ ಸೋಮಶೇಖರ್ ಮಾತನಾಡಿದರು. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net