

ಅರಟಾಳ: ಮಕ್ಕಳಿಗೆ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಮಾತ್ರ ಮುಂದಿನ ಜೀವನ ಸುಂದರವಾಗಿಸಲು ಸಾಧ್ಯ ಎಂದು ಶೂರಪಾಲಿ ಗಿರೀಶಾನಂದ ಮಹಾರಾಜರು ಹೇಳಿದರು.
ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅವಜೀಕರ ಮಹಾರಾಜರ 118ನೇ ಜಯಂತಿ ಹಾಗೂ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನಿಗೆ ಆಸ್ತಿ, ಅಂತಸ್ತು ಶಾಶ್ವತವಲ್ಲ, ಭಗವಂತನ ನಾಮಸ್ಮರಣೆ ಶಾಶ್ವತ ಎಂದು ಹೇಳಿದರು.
ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರು ಮಾತನಾಡಿ, ಗುರು ವಾಕ್ಯದಲ್ಲಿ ದಿವ್ಯಶಕ್ತಿ ಅಡಗಿದೆ. ಗುರುವಿನ ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ ಎಂದರು.
ಕ್ಯಾರಗುಡ್ಡದ ಮಲ್ಲೇಶ್ವರ ಮಹಾರಾಜರು, ಚಿಕ್ಕಾಲಗುಂಡಿ ಶಿವಶರಣಾನಂದ ಮಹಾರಾಜರು, ಡಾ.ಎಸ್.ಆರ್.ರಾಮನಗೌಡರ ಮಾತನಾಡಿದರು.
ಸಂಗಪ್ಪ ಕಲಘಟಗಿ, ಸೊಲ್ಲಾಪುರ ರೇವಣಸಿದ್ದ ಮಹಾರಾಜರು, ಕೋಹಳ್ಳಿ ಪರಶುರಾಮ ಮಹಾರಾಜರು, ಲಕ್ಮಣ ಗುಗ್ಗರಿ, ಎ.ಟಿ.ಮಾಳಿ, ಡಾ.ಶ್ರೀಶೈಲ ಕಲಘಟಗಿ, ಅಣ್ಣಾಸಾಹೇಬ ಅಡಹಳ್ಳಿ, ರಾವಸಾಬ ಬೇವನೂರ, ವಿರುಪಾಕ್ಷ ಅಡಹಳ್ಳಿ, ಬಾಹುಸಾಹೇಬ ಮಹಾರಾಜರು, ಆನಂದ ಕಲಘಟಗಿ, ಅವಜೀಶ ಕಲಘಟಗಿ ಹಾಗೂ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ಶಿವಶರಣಾನಂದ ಮಹಾರಾಜರು ನಿರೂಪಿಸಿದರು.