ಉತ್ತಮ ಸಂಸ್ಕಾರದಿಂದ ಮಾತ್ರವೇ ವ್ಯಕ್ತಿಯ ನಡುವಳಿಕೆ ರೂಪಗೊಳ್ಳಲು ಸಾಧ್ಯ: ಶಿವಪ್ರಕಾಶ ಸ್ವಾಮೀಜಿ

ಉತ್ತಮ ಸಂಸ್ಕಾರದಿಂದ ಮಾತ್ರವೇ ವ್ಯಕ್ತಿಯ ನಡುವಳಿಕೆ ರೂಪಗೊಳ್ಳಲು ಸಾಧ್ಯ: ಶಿವಪ್ರಕಾಶ ಸ್ವಾಮೀಜಿ
Published on

ಅರಸೀಕೆರೆ: ಉತ್ತಮ ಸಂಸ್ಕಾರದಿಂದ ಮಾತ್ರವೇ ವ್ಯಕ್ತಿಯ ನಡುವಳಿಕೆ ರೂಪಗೊಳ್ಳಲು ಸಾಧ್ಯ ಎಂದು ಹರಳಕಟ್ಟ ಶಾಖಾ ಮಠದ ಶ್ರೀಶಿವಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಅನುಭವ ಮಂಟಪ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 20ನೇ ವರ್ಷದ ಪಟ್ಟಾಧಿಕಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಮರುಳಸಿದ್ದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಪ್ರತಿಯೊಬ್ಬರ ಮನಸ್ಸುಗಳ ನಡುವೆ ಪ್ರೀತಿ, ವಿಶ್ವಾಸ, ನಂಬಿಕೆ ಬೀಜ ಬಿತ್ತಬೇಕೆ ವಿನಹಃ ದ್ವೇಷ, ಅಸೂಯೆ ಭಾವನೆಯನ್ನಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.ಹನ್ನೆರಡನೇ ಶತಮಾನದ ಬಸವಾದಿ ಶಿವಶರಣ ಆಶಯಗಳನ್ನು ಮೈಗೂಡಿಸಿಕೊಂಡಲ್ಲಿ ಅನರ್ಥದ ಹಾದಿಹಿಡಿಯುವುದು ತಪ್ಪಲಿದೆ. ಗ್ರಾಮೀಣ ಜನರ ಶೈಕ್ಷಣಿಕ ಹಿತ ಮನಗಂಡಿದ್ದ ಹಿರಿಯ ಶ್ರೀಗಳು ನಾಡಿನ ಉದ್ದಗಲಕ್ಕೂ ಶಾಲೆ ಕಾಲೇಜುಗಳನ್ನು ತೆರೆಯುವ ಮೂಲಕ ಅಕ್ಷರ ಜ್ಞಾನ ಬಿತ್ತುವ ಕೆಲಸ ಮಾಡಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಬದುಕು ಪರಿಪೂರ್ಣವಾಗಲಿದೆ ಎಂದರು.

ಸೂಚನೆ- ಸಭೆ ಮಧ್ಯೆ ಪ್ಲಾಸ್ಟಿಕ್ ಹಾವಳಿ ಕುರಿತು ಗಮನ ಸೆಳೆದ ಶ್ರೀಗಳು ಕಣಕಟ್ಟೆ ಗ್ರಾಮದಿಂದ ಅಗ್ಗುಂದ ಗ್ರಾಮದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಅನುಪಯುಕ್ತ ತ್ಯಾಜ್ಯ ವಿಲೇವಾರಿ ಅಗತ್ಯವಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಡಾಳು ಸ್ವಾಮಿ ಇತ್ತ ಗಮನಹರಿಸಬೇಕು ಎಂದು ಸೂಚನೆ ನೀಡಿದ ಶ್ರೀಗಳು ಅನಗತ್ತ ವ್ಯಾಟ್ಸ್ಯಾಪ್ ಸಂದೇಶ ಹಾಕುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ತರಳಬಾಳು ಯುವ ವೇದಿಕೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಪೆಟ್ಟಿಗೆ ನೀಡಲಾಯಿತು. ತಾಲೂಕು ಸಾಧೂ ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಹಿರಿಯೂರು ರೇವಣ್ಣ ಮಾತನಾಡಿದರು. ಸಮಾಜದ ಮುಖಂಡರು ಹಾಗೂ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net