ಉತ್ತಮ ಸಂದೇಶ ಕೊಡುವುದೇ ಕಾವ್ಯ

CTD---1
Published on

ಚಿತ್ರದುರ್ಗ: ರಾಜ್ಯಸಾಹಿತ್ಯ ಅಕಾಡೆಮಿ, ಅಭಿರುಚಿ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಗರದ ಪಿವಿಎಸ್ ಕಾಲೇಜಿನಲ್ಲಿ ಶನಿವಾರ ‘ಚಕೋರ ಉಪನ್ಯಾಸ ಮಾಲಿಕೆ ಏರ್ಪಡಿಸಲಾಗಿತ್ತು.

ಕವಯತ್ರಿ ಕೆ.ನಿರ್ಮಲಾ ಮರಡಳಿಹಳ್ಳಿ ಮಾತನಾಡಿ, ಕಾವ್ಯ ಎಂದರೆ ಬದುಕು. ಪ್ರಾಸ, ಲಯ, ಛಂದಸ್ಸು ಮೀರಿ ಬದುಕಿನಲ್ಲಿ, ಜವಾಬ್ದಾರಿ, ಮಾನವೀಯತೆ ಮತ್ತು ಪ್ರೀತಿ ವಾತ್ಸಲ್ಯಗಳು ತುಂಬಿರಬೇಕೆಂಬ ಉತ್ತಮ ಸಂದೇಶವನ್ನು ಸಮಾಜಕ್ಕೆ ಕೊಡುವುದಾಗಿದೆ ಎಂದರು.

ಅಭಿರುಚಿ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ದೊಡ್ಡಮಲ್ಲಯ್ಯ ಮಾತನಾಡಿ, ಯುವ ಸಮುದಾಯಕ್ಕೆ ಸಾಹಿತ್ಯವನ್ನು ಮುಟ್ಟಿಸುವ ಗುರುತರ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದರು.

ಚಿತ್ರ ಕಲಾವಿದ ಜಬೀವುಲ್ಲಾ ಎಂ.ಅಸದ್ ಮಾತನಾಡಿದರು. ಕಸಾಪ ತಾಲೂಕು ನಿಕಟಪೂರ್ವ ಅಧ್ಯಕ್ಷ ಎಂ.ಆರ್.ದಾಸೇಗೌಡ, ಲೇಖಕ ಎಂ. ಮೃತ್ಯುಂಜಯಪ್ಪ, ಶಿಕ್ಷಕ ಪರಮೇಶ್ವರಪ್ಪ ಕುದುರಿ, ಕವಯಿತ್ರಿ ಚಾಂದನಿ ಸುಲ್ತಾನಾ, ಪರಿಸರ ಪ್ರೇಮಿ ಪಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿದರು.

ಪಿವಿಎಸ್ ಶಿಕ್ಷಣ ಸಂಸ್ಥೆ ಪ್ರಾಚಾರ್ಯೆ ಎಸ್.ಆರ್. ಉಷಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪದ ನಿಕಟಪೂರ್ವ ಗೌರವ ಕಾರ್ಯದರ್ಶಿಗಳಾದ ಕೆ.ಎಂ. ಯೂಸೂಪ್ ಇತರರಿದ್ದರು. ನಂದಿನಿ ವಂದಿಸಿದರು. ಸುರೇಶ್ ನಿರೂಪಿಸಿದರು. ಶೈಲಜಾ ಮತ್ತು ಐಶ್ವರ್ಯಾ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net