ಉತ್ತಮ ಶಿಕ್ಷಣದಿಂದ ಉಜ್ವಲ ಭವಿಷ್ಯ

24 HBD 2
ಚಿಟಗುಪ್ಪದ ಸರಕಾರಿ ಪದವಿ ಕಾಲೇಜಿನಲ್ಲಿ ಮಂಗವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಿಸಿದರು. ಮಲ್ಲಿಕಾರ್ಜುನ ಪಾಟೀಲ್, ಅನೀಲ ಜೋಶಿ, ರಾಜಕುಮಾರ ಗುತ್ತೇದಾರ್, ಜೈಕುಮಾರ ಸಿಂಧೆ, ವೀರಶಟ್ಟಿ ಇತರರಿದ್ದರು.
Published on

ಚಿಟಗುಪ್ಪ: ಗುರಿಯೊಂದಿಗೆ ಸತತ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಪಡೆದು ಸಾಧನೆಗೈಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗವಾರ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ಪದವಿ ಅಂತಿಮ ವರ್ಷ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಸದ್ಬಳಕೆಯೊಂದಿಗೆ ಉತ್ತಮ ರೀತಿಯಿಂದ ಶಿಕ್ಷಣ ಪಡೆದು ಮುಂದಿನ ಜೀವನದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಸದಾ ಗುರು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಬೇಕೆಂದು ಎಂದರು.

ಪ್ರಾಂಶುಪಾಲ ಜೈಕುಮಾರ ಸಿಂಧೆ , ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಚಂದ್ರಶೇಖರ ಅರಳಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶಾಂತಕುಮಾರ ಪಾಟೀಲ , ಡಾ.ವೀರಶೆಟ್ಟಿ ಮೈಲೂರಕರ , ಪ್ರಮುಖರಾದ ಮಲ್ಲಿಕಾರ್ಜುನ ಪಾಟೀಲ, ಅಮಿತಕುಮಾರ, ರಾಜಕುಮಾರ ಗುತ್ತೇದಾರ್, ಅನೀಲ ಜೋಶಿ, ಅಮರ ರೆಡ್ಡಿ , ಕಿರಣಕುಮಾರ ಭೋವಿ, ರಾಜಕುಮಾರ ಐನಾಪುರ, ಪ್ರವೀಣ ರಾಜಪುರೆ, ಸಿದ್ದು ಪಾಟೀಲ, ಡಿ.ಎನ್.ಪತ್ರಿ , ಸಂಜು ವಾಡೇಕರ ಇತರರಿದ್ದರು. ವಿವಿಧ ಕ್ರೀಡೆಯಲ್ಲಿ ವಿಜಯ ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net