ಉತ್ತಮ ಶಿಕ್ಷಣ ಪಡೆಯಿರಿ

30-SanduruP2
Published on

ಸಂಡೂರು: ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕೆಂದು ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಸತ್ಯನಾರಾಯಣ ಮಾಸ್ತಿ ಹೇಳಿದರು.

ಕೃಷ್ಣಾನಗರ ಗ್ರಾಪಂಯ ದೌಲತ್‌ಪುರ ಆಶ್ರಯ ಕಾಲನಿಯಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಮಕ್ಕಳಿಗೆ ಹಾಲು ಹಾಗೂ ಪಠ್ಯ ಪರಿಕರಗಳನ್ನು ವಿತರಿಸಿ ಬುಧವಾರ ಮಾತನಾಡಿದರು.

ವೇದಿಕೆ ಉಪ ಸಂಚಾಲಕರಾದ ಎಂ.ಪ್ರಕಾಶ್, ಗೋಪಾಲ್ ಶಿಂಧೆ, ವಕೀಲರಾದ ಡಿ.ಸಿದ್ದಣ್ಣ, ಶಫಿ, ಕಾರ್ತಿಕ್, ಇರ್ಫಾನ್, ಶ್ರೀನಿವಾಸ್, ಫಯಾಜ್, ಮುಖ್ಯಶಿಕ್ಷಕಿ ಶೈನಾಜ್, ಶಿಕ್ಷಕಿಯರಾದ ಎನ್.ಸುಮಾ, ಕೆ.ಅಕ್ಷತಾ, ಅಡುಗೆ ಸಿಬ್ಬಂದಿ ಅನ್ನಪೂರ್ಣ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net