ಉತ್ತಮ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪಶಸ್ತಿ

bkt-5-3
Published on

ಬಾಗಲಕೋಟೆ: ನವನಗರದ ಕಲಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರಧಾನ ಸಮಾರಂಭ  ಜರುಗಿತು.

ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಗೊಂಡ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರನ್ನು ಪ್ರಶಸ್ತಿ ನೀಡಿ ಗೌರಿಸಲಾಯಿತು. ಪ್ರಾಥಮಿಕ ವಿಭಾಗದಲ್ಲಿ ಲಕ್ಕಪ್ಪ ಹಳ್ಳಿ, ಅಬ್ದುಲ್ ನದಾಪ್, ಜಯಪ್ರಕಾಶ ಆನೂರ, ಎಸ್.ಆರ್.ಮೇಟಿ, ಬಿ.ವಿ.ಗಣಾಚಾರಿ, ಎಸ್.ಎಚ್.ಮುದಕವಿ, ಎ.ಜೆ.ಸೌದಾಗಾರ, ಮದಿನಾ ಪೀರಜಾದೆ, ದೀಪಾ ಗೋಟೂರ, ಸಂತೋಷ ರಾಮದುರ್ಗ, ರಾಮಪ್ಪ ತಳವಾರ, ಶಿವಲಿಂಗಪ್ಪ ಜುಟ್ಟನಟ್ಟಿ, ಪ್ರೌಢಶಾಲಾ ವಿಭಾಗದಲ್ಲಿ ಕೆ.ಬಿ.ಕಟ್ಟಿಪ್ಪನವರ, ಎ.ಎಂಪಲ್ಲೇದ, ಸಂಗಪ್ಪ ಕರಿಸೈಯಪ್ಪನವರ, ಮಹಾಂತೇಶ ಮಾವಿನಕಾಯಿ, ಡಿ.ಬಿ.ಕಟ್ಟಿ, ರೇಷ್ಮಾ ಕಲಹಾಳ, ವಿಶೇಷ ಪ್ರಾಥಮಿಕ ವಿಭಾಗದಲ್ಲಿ ವಾಯ್.ಎಂ.ಮಂಗಳಗೌರಿ, ಎಸ್.ಡಿ.ಯಲಿಗೋಡ, ಎನ್.ಬಿ.ಮೈಸೂರ, ರಮೇಶ ದೇಸಾಯಿ, ಜೆ.ಎಂ.ಕುಂಬಾರ, ಆರ್.ಎಸ್.ಝಳಕಿ, ರೇಷ್ಮಾ ಗೋರಿ, ವಿಶೇಷ ಪ್ರೌಢಶಾಲಾ ವಿಭಾಗದಲ್ಲಿ ಶ್ರೀಧರ ಗೌಡರ, ಶೋಭಾ ಮುಂಡೆವಾಡಿ, ಬಿ.ಎಸ್.ಮದಿನವರ, ಮೈನುದ್ದಿನ ಪೆಂಡಾರಿ, ವಿಜಯಕುಮಾರ ಜಮಖಂಡಿ, ವಿಜಯಲತಾ ಮಬ್ರೂಮಕರ, ಬಿ.ಎಸ್.ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net