ಉತ್ತಮ ಶಿಕ್ಷಕರಲ್ಲಿರಬೇಕು ಮಾನವೀಯ ಮೌಲ್ಯಗಳು

CTD BOVI SRI
Published on

ಚಿತ್ರದುರ್ಗ: ಅಪಾರ ಜ್ಞಾನದೊಂದಿಗೆ ಸಕಲ ಸದ್ಗುಣಗಳು ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ವೆಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಎಸ್‌ಜೆಎಸ್ ಸಮೂಹ ಸಂಸ್ಥೆಗಳಿಂದ ಶ್ರೀ ಭೋವಿ ಗುರುಪೀಠದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,ಶಿಕ್ಷಕರು ನಡೆದಾಡುವ ವಿಶ್ವಕೋಶದಂತೆ ಇರಬೇಕು. ಅ ವರು ಭವ್ಯಭವಿಷ್ಯದ ಮಾರ್ಗದರ್ಶಕರು. ಸ್ವಾಸ್ಥ್ಯ ಸಮಾಜದ ಸುಧಾರಕರು ಹಾಗೂ ನವಯಗದ ನಾವಿಕರೂ ಆಗಿದ್ದಾರೆ. ಸಂತಸದಿಂದ ವೃತ್ತಿ ಆಯ್ಕೆ ಮಾಡಿಕೊಂಡು ಶಿಕ್ಷಕರಾಗಬೇಕು. ಶಿಕ್ಷಣ ವೃತ್ತಿಯ ಬಗ್ಗೆ ಅಪಾರ ಅಭಿಲಾಷೆಯನ್ನು ಹೊಂದಿರಬೇಕೆಂದ ಶ್ರೀಗಳು,ಡಾ.ಸರ್ವೆಪಲ್ಲಿ ರಾಧಾ ಕೃಷ್ಣನ್ ಅವರು ಚಿರಸ್ಮರಣೀಯರಾಗಿದ್ದಾರೆ ಎಂದರು.
ಶ್ರೀ ಪೀಠದ ಶಿಕ್ಷಕರಿಗೆ ಗೌರವ ಸಮರ್ಪಿಸಲಾಯಿತು. ಭೋವಿ ಗುರುಪೀಠದ ಸಿಇಒ ಗೌನಹಳ್ಳಿಗೋವಿಂದಪ್ಪ, ವಿದ್ಯಾಸಂಸ್ಥೆಗಳ ಕಾರ‌್ಯದರ್ಶಿ ಡಿ.ಸಿ.ಮೋಹನ,ಮುಖ್ಯಶಿಕ್ಷಕರಾದ ಶ್ರೀಧರ,ಹನುಮಂತಪ್ಪ,ಆನಂದ ತಳವಾರ,ದಿನೇಶ್,ಬೋಧಕ,ಬೋಧಕೇತರ ವರ್ಗದವರು ಹಾಗೂ ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net