ಉತ್ತಮ ವ್ಯಕ್ತಿತ್ವ ರೂಪಿಸುವ ಗುರು

bhr jcccc
ಬಾಳೆಹೊನ್ನೂರಿನ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಶಿಕ್ಷಕಿಯರಾದ ರಜನಿ ದೇವಯ್ಯ, ಸುನೀತಾ, ಜ್ಯೋತಿ ಮೂರ್ತಿ, ನಂದಿನಿ ರಾಜೇಶ್ ಅವರನ್ನು ಗೌರವಿಸಲಾಯಿತು. ಸಹನಾ, ಸುಪ್ರಿಯಾ, ವೈಶಾಲಿ, ಕವಿತಾ, ಕಾಂಚನಾ ಇತರರಿದ್ದರು.
Published on

ಬಾಳೆಹೊನ್ನೂರು: ಶಿಕ್ಷಕ ವೃತ್ತಿ ಶ್ರೇಷ್ಠವಾಗಿದ್ದು, ಇತರ ಎಲ್ಲ ವೃತ್ತಿಗಳಿಗೂ ಶಿಕ್ಷಕ ವೃತ್ತಿಯೇ ಮೂಲವಾಗಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸಹನಾ ಯೋಗೀಶ್ ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್‌ನಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸ್ಥಳೀಯ ಆಯ್ದ ಮಹಿಳಾ ಶಿಕ್ಷಕರಿಗೆ ಅಸೋಸಿಯೇಷನ್ ಆ್ ಇನ್ನರ್‌ವ್ಹೀಲ್ ಕ್ಲಬ್ ಇನ್ ಇಂಡಿಯಾ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ಧಾರೆಯೆರೆದು ಅವರ ಏಳಿಗೆಗೆ ಶ್ರಮಿಸುತ್ತಾರೆ. ವಿದ್ಯಾರ್ಥಿಗಳು ಉನ್ನತ ಸ್ಥಾನಮಾನದೊಂದಿಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಸಾಧನೆ ಮಾಡಲಿ ಎಂದು ಬಯಸುತ್ತಾರೆ. ಶಿಕ್ಷಕರು ಇದ್ದರೆ ಮಾತ್ರ ಇಂಜಿನಿಯರ್, ವೈದ್ಯರು, ಉದ್ಯಮಿಗಳು, ರಾಜಕಾರಣಿಗಳು, ವ್ಯಾಪಾರೋದ್ಯಮ ಹೀಗೆ ಎಲ್ಲ ಕ್ಷೇತ್ರಗಳು ಬೆಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯ್ದ ಶಿಕ್ಷಕರಿಗೆ ವೃತ್ತಿ ಗೌರವ ಸಮರ್ಪಣೆ ಮಾಡಲಾಗಿದೆ ಎಂದರು.

ಶಿಕ್ಷಕಿಯರಾದ ರಜನಿ ದೇವಯ್ಯ, ಸುನೀತಾ, ಜ್ಯೋತಿ ಮೂರ್ತಿ, ನಂದಿನಿ ರಾಜೇಶ್ ಅವರನ್ನು ಗೌರವಿಸಲಾಯಿತು. ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ಸುಪ್ರಿಯಾ, ಸದಸ್ಯರಾದ ವೈಶಾಲಿ ಕುಡ್ವ, ಕವಿತಾ, ಕಾಂಚನಾ, ಜೊಹರಾ, ಸವಿತಾ, ವಿದ್ಯಾ ಪೈ, ವಿಶಾಲಾಕ್ಷಮ್ಮ, ಆಶಾ, ಶುಭಾ, ಪ್ರೀತಿ, ನಿಶ್ಚಿತಾ, ಚೈತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net