

ಬೆಳಗಾವಿ: ಸಕ್ಕರೆ ಕಾರ್ಖಾನೆಗಳು(ಮಿಲ್) ಹಾಗೂ ಇನ್ನಿತರ ಉಪಕರಣಗಳು ನಯವಾಗಿ ಕಾರ್ಯನಿರ್ವಹಿಸಬೇಕಾದರೆ ಲುಬ್ರಿಕೇಶನ್ ವ್ಯವಸ್ಥೆಯು ತುಂಬಾ ಪ್ರಮುಖವಾಗಿರುತ್ತದೆ ಎಂದು
ಬೆಳಗಾವಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ ಹೇಳಿದರು. ಅವರು, ಸೋಮವಾರ ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆವರಣದಲ್ಲಿ ಸಕ್ಕರೆ ಕಾರ್ಖಾನೆಗಳ ತಾಂತ್ರಿಕ ಭಾಗದ ಸಿಬ್ಬಂದಿಗಳಿಗಾಗಿ ಲೂಬ್‌ಮನ್ ಸೋಲುಶನ್ಸ್ ಸಹಯೋಗದಲ್ಲಿ ʻಸಕ್ಕರೆ ಕಾರ್ಖಾನೆಯ ಲುಬ್ರಿಕೇಶನ್ ವ್ಯವಸ್ಥೆ ಮತ್ತು ಮಿಲ್ ವಿಭಾಗದಲ್ಲಿ ಬಳಸುವ ಲುಬ್ರಿಕಂಟ್ಸ್ʼ ವಿಷಯದ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಕಾರ್ಖಾನೆಯಲ್ಲಿ ಉಪಯೋಗಿಸುವ ಲುಬ್ರಿಕಂಟ್ಸ್ (ಆಯಿಲ್ ಮತ್ತು ಗ್ರೀಸ್) ಜೈವಿಕವಾಗಿ ವಿಘಟನೆ ಹೊಂದಬೇಕು ಇಲ್ಲವಾದರೆ ಅವುಗಳು ನಿಸರ್ಗಕ್ಕೆ ಹಾನಿಕಾರಕವಾಗುತ್ತವೆ ಎಂದರು. ಇಂದಿನ ವಿಚಾರ ಸಂಕಿರಣ ಲುಬ್ರಿಕೇಶನ್ ವಿಭಾಗದ ಪರಿಣಿತರಿಂದ ಮಾಹಿತಿ ನೀಡುವುದಾಗಿದ್ದು, ಕಾರ್ಖಾನೆಗಳ ಪ್ರತಿನಿಧಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಗುಣಮಟ್ಟದ ಲುಬ್ರಿಕಂಟ್ಸ್ ಬಳಸಿ ಉಪಕರಣಗಳ ಕಾರ್ಯಬದ್ಧತೆಯನ್ನು ಹೆಚ್ಚಿಸಲು ನೇರವಾಗಬೇಕು ಇದರಿಂದ ಕಾರ್ಖಾನೆಯು ಆರ್ಥಿಕವಾಗಿ ಸಫಲಗೊಳ್ಳಬಹುದು ಸಾಧ್ಯವಾಗಲಿದೆ ಎಂದರು. ಈ ಕಾರ್ಯಾಗಾರದಲ್ಲಿ ಕೆ.ಜಿ. ಕಾರ್ಪೊರೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭದ್ರೇಶ ನಾಗೋರಿ, ಲೂಬ್‌ಮನ್ ಸೊಲ್ಯುಶನ್ಸ್ ಸಿಇಓ ಅಭಿನಯ ಮಿಥಲ್, ಅವರು ಲುಬ್ರಿಕೇಶನ್ ವಿಭಾಗದಲ್ಲಿ ಹೊಸ ಆವಿಷ್ಕಾರಗಳು, ಉತ್ತಮ ಗುಣಮಟ್ಟದ ಲುಬ್ರಿಕಂಟ್ಸ್ ಬಳಸುವುದರಿಂದ ಆಗುವ ಲಾಭಗಳು ಹಾಗೂ ಮುಂದೆ ಆಗುವ ಬದಲಾವಣೆಗಳ ಕುರಿತು ವಿವರವಾದ ಉಪನ್ಯಾಸ ನೀಡಿದರು.