

ನೆಲಮಂಗಲ: ಉತ್ತಮ ರಸ್ತೆಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಕಾರಿ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಲ್ಲಿ ವಿವಿಧ ಗ್ರಾಮದ ಸಂಪರ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಹಲವು ವರ್ಷಗಳಿಂದಲೂ ಹದೆಗೆಟ್ಟಿದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಗುಣಮಟ್ಟ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಸಾರ್ವಜನಿಕರು, ಜನಪ್ರತಿನಿಧಿಗಳ ಜ ತೆ ಸಂಪರ್ಕವಿರಿಸಿಕೊಂಡು ಗ್ರಾಮದ ಸಮಸ್ಯೆ ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದರು.
ಟಿ.ಬೇಗೂರು ಗ್ರಾಪಂನ ಟಿ.ಬೇಗೂರು ಗ್ರಾಮದಿಂದ ಬ್ಯಾಡರಹಳ್ಳಿಯ ಮುಖ್ಯರಸ್ತೆ ವರೆಗೂ 50 ಲಕ್ಷ ರೂ. ವೆಚ್ಚದಲ್ಲಿ 600 ಮೀ. ಕಾಮಗಾರಿ, ಅರಳೆದಿಬ್ಬದಿಂದ ತಿಮ್ಮಲಪುರಕ್ಕೆ ಸಂಪರ್ಕಿಸುವ 300ಮೀ ರಸ್ತೆಗೆ 25 ಲಕ್ಷ ರೂ., ತೊರೆಕೆಂಪೋಹಳ್ಳಿಯಿಂದ ಅಗರಸಹಳ್ಳಿಯ 600ಮೀ ರಸ್ತೆಗೆ 40 ಲಕ್ಷ ರೂ., ಅರಳಸಂದ್ರದಿಂದ ಗಂಗಬೈಲಪ್ಪನಪಾಳ್ಯದವರೆಗೂ 500 ಮೀ ರಸ್ತೆಗೆ 30 ಲಕ್ಷ ರೂ.ಹಾಗೂ ಶ್ರೀನಿವಾಸಪುರ ಗ್ರಾಪಂನ ಮದಲಕೋಟೆ ರಸ್ತೆಯನ್ನು 25 ಲಕ್ಷ ರೂ., ಕಂಬದಕಲ್ಲು ಮುಖ್ಯರಸ್ತೆವರೆಗೂ 25ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗ್ರಾಪಂ ಸದಸ್ಯರಾದ ವಸಂತ್, ಜಗದೀಶ್, ಪ್ರಕಾಶ್, ರಾಧಾಸಿದ್ಧರಾಜು, ಲತಾಹನುಮಂತರಾಜು, ಯಶೋಧತಿಮ್ಮರಾಜು, ಮಂಜುನಾಥ್, ಬಿ.ಆರ್.ಂಂಜುನಾಥ್, ಕಲಾವತಿಮುನಿರಾಜು, ರತ್ನಮ್ಮ, ಮಾಜಿ ಅಧ್ಯಕ್ಷ ಗಂಗರಾಜು, ಮುಖಂಡ ಪಾಟೇಲ್‌ರಾಜಣ್ಣ, ಗಣೇಶ್, ರವಿಕುಮಾರ್ ಮತ್ತಿತರರು ಇದ್ದರು.