

ಚಿತ್ರದುರ್ಗ: ಪದವಿ ಜತೆ ಕೌಶಲಾಧಾರಿತ ಶಿಕ್ಷಣ ಕಲಿಯದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದೆಂದು ದೇವರಾಜ ಅರಸು ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.
ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪ್ರೇಶರ್ಸ್ ಡೇ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಗಟ್ಟಿ ನಿರ್ಧಾರ,ಸ್ಪಷ್ಟ ಗುರಿ ಅಳವಡಿಸಿಕೊಂಡರೆ ಸ್ವಾಭಿಮಾನದಿಂದ ಬದುಕಬಹುದು ಎಂದರು.
ಬರ ಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ದೊಡ್ಡ, ದೊಡ್ಡ ಕೈಗಾರಿಕೆಗಳಿಲ್ಲ. ಶಿಕ್ಷಣ ಪಡೆದವರು ಬೆಂಗಳೂರಿನಂಥ ನಗರಗಳಲ್ಲಿ ನೆಲೆಸುತ್ತಾರೆ. ಕಷ್ಟಪಟ್ಟು ಓದಿ ನ್ಯಾಯವಾಗಿ ದುಡಿದು ಉತ್ತಮ ಬದುಕು ಕಂಡು ಕೊಳ್ಳ ಬೇಕು. ದುಡಿಯದೆ ಸೋಮಾರಿಗಳಾದರೆ ಮತ್ತೊಬ್ಬರ ಮುಂದೆ ಕೈಚಾಚ ಬೇಕಾಗುತ್ತದೆ ಎಂದರು.
ಪ್ರಾಚಾರ್ಯ ಡಾ.ಎ.ಜೆ.ಶಿವಕುಮಾರ್, ಬಿಇಡಿ ಕಾಲೇಜು ಪ್ರಾಚಾರ್ಯ ಡಾ.ಬಿ.ಸಿ. ಅನಂತರಾಮು, ಸಂಸ್ಥೆ ಚೀಫ್ ಕೋ-ಆರ್ಡಿನೇಟ ರ್ ಆರ್.ಎಸ್.ರಾಜು, ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಎಸ್.ಬಿ.ನವಾಜ್ ಮತ್ತಿತರರು ಇದ್ದರು.