

ಹಾಸನ: ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಉತ್ತಮ ಬಡಾವಣೆ ನಿರ್ಮಿಸಿ ಕಡಿಮೆ ದರದಲ್ಲಿ ಸದಸ್ಯರಿಗೆ ನಿವೇಶನ ವಿತರಿಸಲಾಗುವುದೆಂದು ಜಿಲ್ಲಾ ಸರ್ಕಾರಿ ಅರೆ ಸರ್ಕಾರಿ ಹಾಗು ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್ ಅವರು ಹೇಳಿದರು.
ನಗರದ ಗುರು ಭವನದಲ್ಲಿ ಸೋಮವಾರ ಏಪಡಿಸಿದ್ದ ಜಿಲ್ಲಾ ಸರ್ಕಾರಿ ಅರೆ ಸರ್ಕಾರಿ ಹಾಗು ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 6ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಜಿಲ್ಲೆಯಲ್ಲಿ ಅತ್ಯುತ್ತಮ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವಾಗಿದೆ. ಪಾರದರ್ಶಕವಾಗಿ ಕೆಲಸ ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಸದಸ್ಯರ ಸಹಕಾರದಿಂದ ಉತ್ತಮವಾದ ಬಡಾವಣೆ ನಿರ್ಮಿಸಿ ಕಡಿಮೆ ದರದಲ್ಲಿ ನಿವೇಶನಗಳನ್ನ ಸದಸ್ಯರಿಗೆ ಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಸಭೆಗೆ ತಿಳಿಸಿದರು.
ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎನ್.ಪರಮೇಶ್ ಅವರು ಮಾತನಾಡಿ, ಕೋ ಆಪರೇಟಿವ್ ಪ್ರಾರಂಭದ ಬಗ್ಗೆ ಅದರ ಕಾರ್ಯ ವ್ಯಾಪ್ತಿಯ ಬಗ್ಗೆ ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ನೌಕರರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ಸಮಸ್ಯೆಗಳನ್ನು ಎದುರಿಸಿ ಈಗ ಮುಂದೆ ಬಂದಿರುವ ಅತ್ಯುತ್ತಮ ಹಾಗು ರಾಜ್ಯಮಟ್ಟದ ಹೆಸರು ಪಡೆದಿರುವ ನಮ್ಮ ಕೋ ಆಪರೇಟಿವ್ ಸೊಸೈಟಿಯು ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಭೆಯನ್ನು ಗೌರವಾಧ್ಯಕ್ಷ ಬಿ.ಎನ್.ರಾಜಶೇಖರಪ್ಪ ಅವರು ಉದ್ಘಾಟಿಸಿದರು. ಗೌರವ ಕಾರ್ಯದರ್ಶಿ ಸತೀಶ್, ಗೌರವಾಧ್ಯಕ್ಷ ಆರ್.ಸಿ.ಬೈರಪ್ಪ, ಉಪಾಧ್ಯಕ್ಷ ಬಿ.ಆರ್.ಧರ್ಮ, ಕೆ.ಸಾವಿತ್ರಮ್ಮ, ಲೋಕೇಶ್ ಕುಮಾರ್ ಇತರರಿದ್ದರು.