ಉತ್ತಮ ನಾಗರಿಕರಾಗಿ ಬಾಳಿ

12 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಒಳ್ಳೆ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ ಜೀವನ ಸಾಗಿಸಬೇಕು ಎಂದು ಕೆ.ಇ. ಬೋರ್ಡ್ ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಹೇಳಿದರು.
ನಗರದ ಪ್ರತಿಭಾ ಪ್ರತಿಷ್ಠಾನ ವತಿಯಿಂದ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಿತ್ಯ ಅಭ್ಯಾಸದ ಜತೆಗೆ ಯೋಗ, ವ್ಯಾಯಾಮ ಮಾಡುವ ರೂಢಿ ಬೆಳೆಸಿಕೊಳ್ಳಬೇಕು. ಇದರಿಂದ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ನೆಮ್ಮದಿ ಸಿಗಲಿದೆ. ಪರಿಶ್ರಮದಿಂದ ಓದಿ ಪಾಲಕರಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಉತ್ತಮ ಹೆಸರು ತರುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿ.ಜಿ. ನರಸಾಪುರ ಮಾತನಾಡಿ, ವಿದ್ಯಾರ್ಥಿಗಳು ಸ್ವಂತ ಪರಿಶ್ರಮದಿಂದ ಓದಿ ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಸಾಧಕರಾದ ಧ್ರುವ ಕೋನೇರಿ, ಶ್ರೀಪಾದ ಬೋರಕರ, ಎಂ.ಎನ್. ಶೂರ್ಪಾಲಿ ಹಾಗೂ ಶಿಷ್ಯ ವೇತನಕ್ಕೆ ಸಹಕಾರ ನೀಡುತ್ತಿರುವ ಎಸ್.ಕೆ. ಪೂಜಾರ, ಆರ್.ಜಿ. ನರಸಾಪುರ, ಎನ್.ವಿ. ಪಾಗಾ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಒಟ್ಟು 90 ವಿದ್ಯಾರ್ಥಿಗಳಿಗೆ 3 ಲಕ್ಷ ರೂ. ಶಿಷ್ಯ ವೇತನ ವಿತರಿಸಲಾಯಿತು.
ಎಂ.ಎನ್. ಟಂಕಸಾಲಿ, ಎಸ್.ಎಂ. ದೇಶಪಾಂಡೆ, ವಿನಾಯಕ ದೇಶಪಾಂಡೆ, ನವೀನ ಕೊರಲಹಳ್ಳಿ, ಡಿ.ಬಿ. ಮನ್ಸೂರ, ಅವಿನಾಶ ಕುಲಕರ್ಣಿ, ಅನಿಲ ಕೊಪ್ಪ, ಗೋಪಾಲ ಕಮಲಾಪುರ, ಆನಂದ ಸಬನೀಸ, ಮಣ್ಣೂರಕರ, ಹರ್ಷ ಡಂಬಳ, ಅನಂತ ಕುಲಕರ್ಣಿ, ಎನ್.ಎ. ಸಿದ್ಧಾಂತಿ, ಮುರಳಿ ಹುಯಿಲಗೋಳ, ರಮೇಶ ನಾಡಗೀರ, ಆನಂದ ಕುಲಕರ್ಣಿ, ಎಚ್.ವಿ. ಸಿಂದಗಿ, ಇತರರು ಇದ್ದರು.
ವೆಂಕಟೇಶ ದೇಸಾಯಿ ಸ್ವಾಗತಿಸಿದರು. ಎಂ.ಎನ್. ಧಾರವಾಡಕರ ವರದಿ ವಾಚಿಸಿದರು. ರಮೇಶ ಕಾಖಂಡಕಿ ನಿರೂಪಿಸಿದರು. ಶರದ ಕರಗುದರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net