ಉತ್ತಮ ಜೀವನಕ್ಕೆ ಕೌಶಲ ತರಬೇತಿ ಅಗತ್ಯ

CTD 4 BEO--0002
Published on

ಚಿತ್ರದುರ್ಗ: ಕಿಶೋರಿಯರಿಗೆ ಪಠ್ಯದೊಂದಿಗೆ ಕೌಶಲ ತರಬೇತಿಗಳನ್ನು ನೀಡುವ ಮೂಲಕ ಸಮಾಜದಲ್ಲಿ ಸಮಾನ ಬದುಕಿಗೆ ಅವಕಾಶ ಕಲ್ಪಿಸಿಕೊಡುವುದು ಅ ಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ ಹೇಳಿದರು.
ವಿಮುಕ್ತಿ ವಿದ್ಯಾಸಂಸ್ಥೆ, ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಹಾಗೂ ದಮ್ಮಾ ಸ್ಕೂಲ್ ಆಫ್ ಡ್ರಾಮಾದಿಂದ,ಶಿಕ್ಷಣ ಮಾತೆ ಸಾವಿತ್ರಿಬಾಯಿಫುಲೆ ಅವರ ಜನ್ಮದಿನದ ಅಂಗ ವಾಗಿ ಮಠದಕುರುಬರಹಟ್ಟಿ ಎಂ.ಆರ್.ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಿಶೋರಿಯರಿಗೆ ಕಂಪ್ಯೂಟರ್,ಹೊಲಿಗೆ ತರಬೇತಿ,ಲೈಬ್ರರಿ ಮತ್ತು ಸಂಪನ್ಮೂಲ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಓದಿನೊಂದಿಗೆ ಉತ್ತಮ ಜೀವನ ರೂ ಪಿಸಿಕೊಳ್ಳಲು ಕೌಶಲ ತರಬೇತಿ ಅಗತ್ಯವಿದೆ ಎಂದರು.
ದಮ್ಮಾ ವಿಮುಕ್ತಿ ವಿದ್ಯಾಸಂಸ್ಥೆ ಸಂಪನ್ಮೂಲ ವ್ಯಕ್ತಿ ಅರುಣ್ಯಸಾಗರ್ ಅವರು ಮಾತನಾಡಿ, ಕಿಶೋರಿಯರು ಭವಿಷ್ಯದಲ್ಲಿ ತಮ್ಮ ಬದುಕನ್ನು ಉತ್ತಮ ವಾಗಿ ರೂಪಿಸಿಕೊಳ್ಳುವುದಕ್ಕೆ ಪೂರಕವಾಗಿ ತಮ್ಮ ಸಂಸ್ಥೆ ವಿವಿಧ ಕೌಶಲಾಧಾರಿತ ತರಬೇತಿಗಳನ್ನು ನೀಡುತ್ತಿದೆ ಎಂದರು. ಸಂಪನ್ಮೂಲ ವ್ಯಕ್ತಿ ಸರೋ ವರ್‌ಬೆಂಕಿಕೆರೆ ಅವರು ಮಾತನಾಡಿ, ಸಾವಿತ್ರಿಬಾಯಿಫುಲೆ ಅವರು ಶಿಕ್ಷಣಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು. ಅವರ ಆದರ್ಶಗಳನ್ನು ಇವತ್ತಿನ ಪೀಳಿಗೆ ಪಾಲಿಸಬೇಕಿದೆ ಎಂದರು. ವಿಮುಕ್ತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣ ಅವರು ಮಾತನಾಡಿದರು. ಕಮಲಮ್ಮ,ದುರುಗಮ್ಮ, ಗೀತಾ,ನಾಗರತ್ನ, ಬೀಬಿಜಾನ್,ಪಲ್ಲವಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net