ಉತ್ತಮ ಜೀವನ ಶೈಲಿ ಬೆಳೆಸಿಕೊಳ್ಳಿ

27ark-2
ಅರಕಲಗೂಡು ತಾಲೂಕಿನ ರಾಮನಾಥಪುರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ವೇಯ್ಟ ಲಿಫ್ಟಿಂಗ್ ಕ್ರೀಡಾಪಟು ಬಿ.ಎನ್.ಉಷಾ ಅವರನ್ನು ಸನ್ಮಾನಿಸಲಾಯಿತು. ಸರ್ವ ಮಂಗಳಾ, ಸ್ವಾಮಿ, ಡಾ.ಪ್ರದೀಪ್ ಇತರರಿದ್ದರು.
Published on

ಅರಕಲಗೂಡು: ವಿದ್ಯಾರ್ಥಿಗಳು ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಉತ್ತಮ ಜೀವನ ಶೈಲಿ ಬೆಳೆಸಿಕೊಳ್ಳಲು ಶ್ರದ್ಧೆಯಿಂದ ಕೂಡಿದ ಕ್ರೀಡಾಭ್ಯಾಸ ಮುಖ್ಯ ಎಂದು ರಾಮನಾಥಪುರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸರ್ವಮಂಗಳಾ ತಿಳಿಸಿದರು.

ತಾಲೂಕಿನ ರಾಮನಾಥಪುರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದ ವತಿಯಿಂದ ಭಾರತದ ಹಾಕಿ ದಂತಕತೆ ಮೇಜರ್ ಧ್ಯಾನ್‌ಚಂದ್ ಸ್ಮರಣಾರ್ಥವಾಗಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೇಯ್ಟ ಲಿಫ್ಟಿಂಗ್ ಕ್ರೀಡಾಪಟು ಬಿ.ಎನ್.ಉಷಾ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಬಹುದು ಎಂದರು.

ಉಪನ್ಯಾಸಕರಾದ ಸ್ವಾಮಿ, ನಂದಿನಿ, ಕೆ.ಎನ್. ಕೃಷ್ಣ, ಡಾ. ಪ್ರದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net