ಉತ್ತಮ ಗುರಿಯತ್ತ ಹೆಜ್ಜೆ ಇಟ್ಟಾಗ ಗುರಿ ತಲುಪುವ ದಾರಿ ನಿಮ್ಮದಾಗುತ್ತದೆ: ಎಮ್.ಕೆ. ಕಮಲ್ ಕುಮಾರ್

ಉತ್ತಮ ಗುರಿಯತ್ತ ಹೆಜ್ಜೆ ಇಟ್ಟಾಗ ಗುರಿ ತಲುಪುವ ದಾರಿ ನಿಮ್ಮದಾಗುತ್ತದೆ:  ಎಮ್.ಕೆ. ಕಮಲ್ ಕುಮಾರ್
Published on

ಹಾಸನ : ಪ್ರಸ್ತುತದಲ್ಲಿ ಯುವಕ-ಯುವತಿಯರು ಕಾಲ್ಪನಿಕ ವಿಷಯದಲ್ಲಿ ಆಕರ್ಷಣೆಗೆ ಒಳಗಾಗಿ ತಮ್ಮ ಬದುಕನ್ನೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಮತ್ತು ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಎಮ್.ಕೆ. ಕಮಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

    ನಗರದ ರವೀಂದ್ರ ನಗರದಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ನಿಲಯದಲ್ಲಿ ಭಾರತ ಸೇವಾದಳ ಹಾಸನ ಜಿಲ್ಲಾ ಸಮಿತಿ ವತಿಯಿಂದ ಸೇವಾದಳ ಸಪ್ತಾಹದ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರಿಗೆ ಅರಿವು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹದಿಹರೆಯದ ವಯಸ್ಸಿನಲ್ಲಿ ಬೇಡವಾದ ವಿಚಾರಗಳಿಗೆ ಕಿವಿಗೊಡದೇ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ ನಿಮ್ಮ ಉತ್ತಮ ಗುರಿಯತ್ತ ಹೆಜ್ಜೆ ಇಟ್ಟಾಗ ಗುರಿ ತಲುಪುವ  ದಾರಿ ನಿಮ್ಮದಾಗುತ್ತದೆ ಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಿಮ್ಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಗಿರಿಜಾ,  ಸ್ತ್ರೀರೋಗ ತಜ್ಞೆ ಡಾ. ಸುಷ್ಮಾ ಸ್ತನ ಕ್ಯಾನ್ಸರ್ ಮತ್ತು ಮಹಿಳೆಯರೇ ಮನೆಯಲ್ಲೇ ಪರೀಕ್ಷಿಸಬಹುದಾದ ಸ್ತನ ಕ್ಯಾನ್ಸರ್‌ನ ವಿಚಾರಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸುತ್ತಾ ನಿಲಯಾರ್ಥಿಗಳು ಕೇಳಿದ ಸ್ತ್ರೀ ಆರೋಗ್ಯಗಳ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದರು. 

ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕೋವಿಡ್ 19ರ ಮುಂಜಾಗ್ರತ ಕ್ರಮವಾಗಿ ಉತ್ತಮ ಗುಣಮಟ್ಟದ ಮಾಸ್ಕನ್ನು ವಿತರಣೆ ಮಾಡಲಾಯಿತು.ಹಿರಿಯ ವಕೀಲೆ ಪುಷ್ಪ ಕೆಂಚಪ್ಪ, ನಿಲಯ ಮೇಲ್ವಿಚಾರಕಿ ಶಾರದಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net