

ಚಿತ್ರದುರ್ಗ: ಯಾವುದೇ ಕ್ಷೇತ್ರವಿರಲಿ ಉತ್ತಮ ಕೆಲಸ ಮಾಡುತ್ತಿರುವ ಪ್ರತಿಭಾವಂತರನ್ನು ಗೌರವಿಸುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದು ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ ಹೇಳಿದರು. ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ನಗರದ ರೋಟರಿ ಬಾಲವನದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಯೋಗ ಶಿಬಿರಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಕೆ.ಟಿ. ತಿಮ್ಮಾರೆಡ್ಡಿ, ವಿಮಲಾಕ್ಷಿ ಅವರನ್ನು ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‌ಕುಮಾರ್ ಸನ್ಮಾನಿಸಿದರು. ಎಂ.ಜೆ. ಕೋಕಿಲಾ ಪ್ರಾರ್ಥಿಸಿದರು. ಟಿ. ವೀರಭದ್ರಸ್ವಾಮಿ, ಮುಕುಂದರಾಜ್, ಸುರಯ್ಯ, ಚಂದ್ರಶೇಖರ್, ನಿರ್ಮಲಾ, ಕವಿತಾ, ರುಕ್ಮಿಣಿ, ನಾಗರತ್ನ ಇತರರು ಇದ್ದರು.