ಉತ್ತಮ ಆಹಾರದ ಆಯ್ಕೆ ಮುಖ್ಯ

bkt-25-2
ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಈಚೆಗೆ ಮಹಿಳಾ ಸಬಲೀಕರಣ ಘಟಕದ ಅಡಿಯಲ್ಲಿ ಆಯೋಜಿಸಲಾದ ಆರೋಗ್ಯ ಮತ್ತು ನೈರ್ಮಲ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾಗಿರಿ ಬಿವಿವಿ ಸಂಘದ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕಿ ಸವಿತಾ ಅಂಗಡಿ ಮಾತನಾಡಿದರು.
Published on

ಬಾಗಲಕೋಟೆ: ಮಹಿಳೆಯರಿಗೆ ನಾರಯುಕ್ತವಾದ ಆಹಾರ ಪದ್ಧತಿ ದೊರೆಯುತ್ತಿಲ್ಲ. ಉತ್ತಮವಾದ ಶಿಸ್ತನ್ನು ಹೊಂದಿದ್ದರೆ ಸರಳವಾದ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾಗಿರಿ ಬಿವಿವಿ ಸಂಘದ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕಿ ಸವಿತಾ ಅಂಗಡಿ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಈಚೆಗೆ ಮಹಿಳಾ ಸಬಲೀಕರಣ ಘಟಕದ ಅಡಿಯಲ್ಲಿ ಆಯೋಜಿಸಲಾದ ಆರೋಗ್ಯ ಮತ್ತು ನೈರ್ಮಲ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಪ್ರತಿ ಕ್ಷಣವು ಹಸನ್ಮುಖಿಯಾಗಿರಬೇಕು. ಉತ್ತಮವಾದ ಸಮಾಜ ಸೃಷ್ಠಿಸುವಲ್ಲಿ ಹೆಣ್ಣು ಮಕ್ಕಳು ಪ್ರಮುಖ ಪಾತ್ರ ನಿರ್ವಹಿಸಬಲ್ಲರು. ಆದರೆ ಆಹಾರ ಪದ್ಧತಿ ಬದಲಾವಣೆಯಿಂದ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ತಂಪಾದ ಆಹಾರ ಪದಾರ್ಥ ಸೇವಿಸಬಾರದು. ಗ್ರಾಮೀಣ ಮಹಿಳೆಯರು ಶೇ.೮೦ ಸದೃಢ ಜೀವನ ಕಳೆಯುತ್ತಿದ್ದಾರೆ ಎಂದರು.

ಹೆಣ್ಣು ಮಕ್ಕಳು ಮುಟ್ಟಿನ ಕುರಿತು ತಿಳುವಳಿಕೆ ಉಳ್ಳವರಾಗಬೇಕು. ಹಿರಿಯರು ಕಲಿಸಿದ ಪಾಠವನ್ನು ಅರಿತುಕೊಂಡು ಮುನ್ನಡೆಯಬೇಕು. ಸ್ವಚ್ಛವಾದ ವಾತಾವರಣದಲ್ಲಿ ಸಮಯವನ್ನು ಕಳೆಯಬೇಕು. ಸುಂದರವಾದ ಜೀವನಕ್ಕಾಗಿ ಕ್ರಿಯಾಶೀಲರಾಗಿ ಎಂದು ತಿಳಿಸಿದರು.

ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಮಾತನಾಡಿ, ಆರೋಗ್ಯ ಯಾವಾಗಲೂ ಅರಿವನ್ನು ಮೂಡಿಸುತ್ತದೆ. ಮಹಿಳೆ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದು, ಮಹಿಳೆಯರ ಕಣ್ಣಲ್ಲಿ ಕೋನಗಳ ಸಂಖ್ಯೆ ಹೆಚ್ಚಿರುತ್ತವೆ. ಸಿಪಿಆರ್‌ನಲ್ಲಿ ಪರಿಣಿತೆ ಇರಬೇಕು. ಹೃದಯಘಾತಕ್ಕೂ ಮುನ್ನ ಎಚ್ಚರವಿರಬೇಕು ಎಂದು ತಿಳಿಸಿದರು.

ಮಹಿಳಾ ಸಬಲೀಕರಣ ಘಟಕ ಡಾ. ಎಲ್.ಎಸ್.ಚವಡಿ, ಪ್ರಾಧ್ಯಾಪಕಿ ವೀಣಾ ಕಲ್ಮಠ, ಜ್ಯೋತಿ ದಿವಟೆ, ಎಸ್.ಕೆ. ಪವಾರ, ಶೈಲಶ್ರೀ ಕಮತೆ, ಶ್ರೇಯಾ ಜೋರಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net