

ಚನ್ನರಾಯಪಟ್ಟಣ: ಜನರು ಬದುಕಿನಲ್ಲಿ ನೆಮ್ಮದಿಯಿಂದರಲು ಉತ್ತಮ ಆರೋಗ್ಯ ಮುಖ್ಯ, ಆರೋಗ್ಯ ಕೆಟ್ಟರೇ ಬದುಕೇ ದುಸ್ತರವಾಗಲಿದೆ ಎಂದು ಮಾಜಿ ಸಚಿವ, ಶಾಸಕ ಕೃಷ್ಣಭೈರೇಗೌಡ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರದಂದು ಎಂ.ಎ.ಗೋಪಾಲಸ್ವಾಮಿ ಅಭಿಮಾನಿ ಬಳಗದಿಂದ ಅಯೋಜಿಸಲಾಗಿದ್ದ ಬೃಹತ್ ಆರೋಗ್ಯಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಹದಗೆಟ್ಟರೇ ಮನುಷ್ಯ ನಿರುತ್ಸಾಹದ ಮಾತುಗಳು, ಸಾವಿನ ಮಾತುಗಳನ್ನಾಡುತ್ತಾನೆ. ಆದೇ ಆರೋಗ್ಯ ಉತ್ತಮವಾಗಿದ್ದಲ್ಲಿ ಚೈತನ್ಯದ ಚಿಲುಮೆಯಾಗುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಆರೋಗ್ಯ ಎನ್ನುವುದು ಗ್ರಾಮೀಣ ಭಾಗದ ಆದೆಷ್ಟೂ ಮಂದಿಗೆ ಮರೀಚಿಕೆಯಾಗಿದೆ. ಅರ್ಥಿಕ ಸಂಕಷ್ಟ, ಸಮಯ, ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೇ ರೋಗಗಳ ಪರೀಕ್ಷೆಯಿಂದ ದೂರವಿದ್ದು, ಏಕಾಏಕಿ ಅಪಾಯ ತಂದುಕೊಳ್ಳುತ್ತಿದ್ದಾರೆ. ರೈತರು ಮೈಬಗ್ಗಿಸಿ ದುಡಿಯುವುದನ್ನು ಮರೆತು ಚಿಕ್ಕವಯಸ್ಸಿನಲ್ಲೆ ಹೃದಯಘಾತಗಳಿಗೆ ಬಲಿಯಾಗುತ್ತಿದ್ದಾರೆ. ತಮಗೆ ಖಾಯಿಲೆ ಇರುವುದೆ ತಿಳಿದಿರುವುದಿಲ್ಲ, ಅಂತಹ ಪರಿಸ್ಥಿತಿಯನ್ನು ದೂರ ಮಾಡುವ ಸಲುವಾಗಿ ಗೋಪಾಲಸ್ವಾಮಿ ಮೇಳದ ಮೂಲಕ ಖಾಯಿಲೆಯನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಗೆ ಮುಂದಾಗಿದ್ದಾರೆ. ಅವರ ಬೆನ್ನಿಗೆ ನಿಲ್ಲುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ, ರಾಜಕಾರಣಿಯಾದವನು ಜನಸೇವೆಯಲ್ಲಿ ತೊಡಗಿದಾಗ ರಾಜಕೀಯಕ್ಕೆ ಅರ್ಥ ಬರುತ್ತದೆ ಎಂದರು.
ಮಾಜಿ ಸಚಿವ ಚೆಲುವನಾರಾಯಣಸ್ವಾಮಿ ಮಾತನಾಡಿ, ಹಣ, ಅಧಿಕಾರದೊಂದಿಗೆ ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಾರ್ಥಕತೆ ಸಾಧ್ಯ, ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮುಖ್ಯ, ಇದೀಗ ಮನೆಬಾಗಲಿಗೆ ಬಂದು ತಪಾಸಣೆ ನಡೆಸಲಾಗುತ್ತಿದೆ. ಇದರ ಸದಯಪಯೋಗವನ್ನು ಜನತೆ ಪಡೆದುಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ ಸಾಧ್ಯವೆಂದ ಅವರು ರಾಜ್ಯದ ಅಭಿವೃದ್ದಿ, ಜನರ ಬದುಕು ಉತ್ತಮವಾಗಬೇಕಾದ್ದಲ್ಲಿ ಕಾಂಗ್ರೆಸ್ ಅತ್ಯವಶ್ಯಕ, ಇಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಬೆಂಬಲಕ್ಕೆ ಎಲ್ಲರೂ ನಿಲ್ಲಬೇಕು, ಶಕ್ತಿಯುತವಾದ ಕಾಂಗ್ರೆಸ್ ಕಟ್ಟಿ ಇತಿಹಾಸ ಮರುಕಳಿಸುವಂತೆ ಮಾಡಬೇಕೆಂದರು.
ಎಂ.ಎ.ಗೋಪಾಲಸ್ವಾಮಿ ಮಾತನಾಡಿ ಯಾವುದೇ ಗಾಡ್‌ಫಾದರ್ ಇಲ್ಲದೆ, ಬ್ಯಾಂಕ್‌ಗ್ರೌಂಡ್ ಇಲ್ಲದೇ ತಾಲೂಕಿಗೆ ಬಂದ ನನ್ನನ್ನು ಎಂಎಲ್ಸಿಯನ್ನಾಗಿಸಿದ ಜನರ, ತಾಲೂಕಿನ ಋಣ ತೀರಿಸಬೇಕಾಗಿದೆ. ಸಾವಿರಾರು ಜನರು ಇಂದು ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು, ತಜ್ಞರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ, ಸ್ಕ್ಯಾನಿಂಗ್ ಸೇರಿ ಎಲ್ಲ ತೆರೆನಾದ ಸೌಲಭ್ಯವನ್ನು ನಮ್ಮ ತಂಡವೇ ನಿಭಾಯಿಸಿ ಅವರನ್ನು ಮನೆಗೆ ಕ್ಷೇಮವಾಗಿ ತಲುಪಿಸುವ ಕೆಲಸ ಮಾಡಲಿದೆ ಎಂದರು.
ಇದೊರಂದಿಗೆ ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿಯೀ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳನ್ನು ಕರೆಸಿ ಆರೋಗ್ಯ ತಪಾಸಣೆ, ಚಿಕಿತ್ಸೆ ಮಾಡಿಸಲಾಗುವುದು ಎಂದರು. ಎಂಎಲ್ಸಿ ರವಿ ಮಾತನಾಡಿದರು, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿದರು.
ಸಮಾರಂಭದಲ್ಲಿ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ, ಸ್ವಾಮೀಜಿಗಳಾದ ಶಂಭುನಾಥಸ್ವಾಮೀಜಿ, ಶಿವನಂದಪುರಿ ಸ್ವಾಮೀಜಿ, ಶಿವಪುತ್ರನಾಥ, ಬಸವಚೈತನ್ಯ ಮಹೇಶ್ವರ ಸ್ವಾಮೀಜಿ, ಮುಖಂಡರಾದ ಜೆ.ಎಂ.ರಾಮಚಂದ್ರ, ಎಂ.ಶಂಕರ್, ಹೆಚ್.ಎಸ್.ಲಲಿತ್‌ರಾಘವ, ಮಹೇಶ್, ಬಾಗೂರುಮಂಜೇಗೌಡ, ಎಂ.ಕೆ.ಮಂಜೇಗೌಡ, ಎಐಸಿಸಿ ಕಾರ್ಯದಶಿ ಸಂದೀಪ್, ಡಾ.ಭಾವನಾ ಗೋಪಾಲಸ್ವಾಮಿ ಸೇರಿ ಇತರರು ಇದ್ದರು.