ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಬಳಸಿ

ravanduru 2
ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಿಂದ ಸಿರಿಧಾನ್ಯಗಳ ಮೇಳ ಏರ್ಪಡಿಸಲಾಗಿತ್ತು.
Published on

ರಾವಂದೂರು: ಸಿರಿಧಾನ್ಯಗಳನ್ನು ಉಪಯೋಗಿಸುವುದರಿಂದ ಮನುಷ್ಯನ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಮುಖ್ಯಶಿಕ್ಷಕಿ ಲಿಲ್ಲಿಮೇರಿ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಿಂದ ಬುಧವಾರ ಏರ್ಪಡಿಸಲಾಗಿದ್ದ ಸಿರಿಧಾನ್ಯಗಳ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮನುಷ್ಯನ ದುರಾಸೆಯಿಂದ ಕೃಷಿಯಲ್ಲಿ ಕ್ರಿಮಿನಾಶಕ ಮತ್ತು ರಾಸಾಯನಿಕಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದ ಪೌಷ್ಟಿಕತೆ ಕಡಿಮೆಯಾಗಿ ಮನುಷ್ಯನ ಆಯಸ್ಸು ಸಹ ಕಡಿಮೆಯಾಗುತ್ತ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಿಡಿಒ ಮಲ್ಲೇಶ್ ಮಾತನಾಡಿ, ಹಿಂದಿನ ಕಾಲದಲ್ಲಿ ಮನುಷ್ಯನ ಆಹಾರ ಪದ್ಧತಿಯು ಉತ್ತಮವಾಗಿದ್ದು, ಆ ಅವಧಿಯ ಜನರು ಆರೋಗ್ಯವಂತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಹುಟ್ಟಿನಿಂದಲೇ ಕಾಯಿಲೆಗಳು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳನ್ನು ಬಳಸಿ ಎಂದು ಸಲಹೆ ನೀಡಿದರು.
ಮೇಳದಲ್ಲಿ ಮಕ್ಕಳು ತಯಾರಿಸಿದ ಚುರುಮುರಿ, ಚಕ್ಕುಲಿ, ಜಾಮೂನು ಮುಂತಾದ ತಿಂಡಿ, ತಿನಿಸುಗಳನ್ನು ಖರೀದಿಸಲು ಜನರು ಮುಗಿಬಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಜಲೇಂದ್ರ, ಸದಸ್ಯ ವಿಜಿ, ಶಿಕ್ಷಕರಾದ ಅಣ್ಣಯ್ಯ, ಕೃಷ್ಣಮೂರ್ತಿ, ಸತೀಶ್, ಮಂಜುಳಾ, ಉಮಾ, ಸಮೀಮ, ಶೀಲಾಮಣಿ, ಜಯಶೀಲಾ, ಲತಾ, ರೂಪಾ, ದೀಪಾ, ಪುಷ್ಪ, ವೀಣಾ, ಸುಮಾ, ಮಲ್ಲೇಶ್, ಸೌಮ್ಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net