

ಕಲಬುರಗಿ: ಮನುಷ್ಯ ಆರೋಗ್ಯವಾಗಿರಲು ಸತ್ವಯುತ ಆಹಾರ ಸೇವನೆ ಅಗತ್ಯ. ಹೀಗಾಗಿ ಪ್ರತಿಯೊಬ್ಬರೂ ನಿತ್ಯ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಬಸವೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಅಶ್ವಿನಿ ಮಾಲಿಪಾಟೀಲ್ ಹೇಳಿದರು.
ಸತ್ಯಂ ಪದವಿಪೂರ್ವ ಕಾಲೇಜಿನಲ್ಲಿ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಯುನಿಸೆಫ್, ಎಂಆರ್‌ಎAಸಿ ಹಾಗೂ ನಗರ ಸಮುದಾಯ ಆರೋಗ್ಯ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತಹೀನತೆ ಮುಕ್ತ ಪೌಷ್ಟಿಕಕ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಯುವಕ, ಯುವತಿಯರು ಜಂಕ್ ಫುಡ್ ಹಿಂದೆ ಬಿದ್ದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೆಚ್ಚು ಚಹಾ, ಕಾಫಿ ಸೇವಿಸುತ್ತಿರುವುದು ಒಳ್ಳೆಯದಲ್ಲ. ಹಸಿರು ತರಕಾರಿಯಿಂದ ದೂರವಿರುವುದರಿಂದಲೇ ಹದಿಹರೆಯದ ವಯೋಮಾನದವರಲ್ಲಿ ರಕ್ತಹೀನತೆಯಂತಹ ತೊಂದರೆ ಹೆಚ್ಚಾಗುತ್ತಿವೆ ಎಂದರು.
ಪ್ರಾಚಾರ್ಯ ಡಾ.ಬಿ.ಎಚ್.ನಿರಗುಡಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪ್ರೊ.ನಮ್ರತಾ ಹವಾ, ಪ್ರೊ.ಅಂಬಿಕಾ, ಪ್ರೊ. ನಿರ್ಮಲಾ ಅಂಕಲಗಿ ಇತರರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ.ಮಹೇಶ ಗಂವ್ಹಾರ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು, ಭಾರತಿ ಹಾಗೂ ಸುಮಾ ನಿರೂಪಣೆ ಮಾಡಿದರು. ಡಾ.ವಿಶ್ವನಾಥ ದೇವರಮನಿ ವಂದಿಸಿದರು.