ಉತ್ತಮ ಆರೋಗ್ಯಕ್ಕೆ ಥಿಂಕ್ ಫಿಟ್ ಸಂಸ್ಥೆ ಉತ್ತೇಜನ

ಉತ್ತಮ ಆರೋಗ್ಯಕ್ಕೆ ಥಿಂಕ್ ಫಿಟ್ ಸಂಸ್ಥೆ ಉತ್ತೇಜನ
Published on

ಹಾಸನ: ದೇಶದ ಆರೋಗ್ಯ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ತಡೆಯಲು ಥಿಂಕ್ ಫಿಟ್ ಸಂಸ್ಥೆ ಸಾಂಪ್ರದಾಯಿಕ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳನ್ನು ಸಮ್ಮಿಳಿತಗೊಳಿದ ಕಾರ್ಯಕ್ರಮಗಳನ್ನು ಪರಿಚಯಿಸಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಆನಂದ್ ತಿಳಿಸಿದರು.

ಅಸ್ತವಸ್ತ ಜೀವನ ಶೈಲಿಯಿಂದ ಜನರನ್ನು ಕಾಡುವ ರೋಗಗಳನ್ನು ತಡೆಗಟ್ಟುವಲ್ಲಿ ನಮ್ಮ ಸಂಸ್ಥೆ ಯಶಸ್ವಿಯತ್ತ ಮುನ್ನಡೆಯುತ್ತಿದೆ. ಪ್ರತಿ ವ್ಯಕ್ತಿಯ ಅನುವಂಶಿಕ ಆರೋಗ್ಯ ಸಮಸ್ಯೆಯ ಅಪಾಯಗಳನ್ನು ತಪ್ಪಿಸಲು ವ್ಯಕ್ತಿ ಆಧಾರಿತ ಆಹಾರ ಮತ್ತು ಜೀವನ ಶೈಲಿಯನ್ನು ಅನುಷ್ಠಾನಗೊಳಿಸಲಾಗುವುದು. ಡಯಾಬಿಟಿಸ್ ಸಮಸ್ಯೆ ಹೊಂದಿರುವವರ ಆಹಾರ ಕ್ರಮ ಬದಲಿಸುವುದು, ಅವರ ಆಹಾರ ಪದ್ಧತಿ ಪರಿಶೀಲಿಸಿ ನಂತರ ಬದಲಾಗಬೇಕಾದ ವಿಷಯಗಳನ್ನು ಗುರುತಿಸಿ ಮೆಟಬಾಲಿಸಂ ಹೆಚ್ಚಿಸಲಾಗುತ್ತದೆ. ಇದರಿಂದ ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮನುಷ್ಯನ ದೇಹ ಪ್ರಕೃತಿ ಬೇರೆ ಆಹಾರಗಳಿಗೆ ಬೇರೆ ಬೇರೆ ರೀತಿಯಾಗಿ ಸ್ಪಂದಿಸುತ್ತದೆ. ಹೀಗಾಗಿ ಹದಿನೈದು ದಿನಗಳ ಕಾಲ ಪರಿಶೀಲನೆ ನಡೆಸಿ ಆಹಾರ ಕ್ರಮ ರೂಪಿಸಲಾಗುವುದು. ನಮಗೆ ಯಾವುದೇ ಕಾಯಿಲೆ ಬಂದರೂ ಔಷಧಿಗಳ ಮೊರೆ ಹೋಗುತ್ತೇವೆ. ಆದರೆ ನಮ್ಮ ಜೀವನ ಶೈಲಿಯಲ್ಲಿ ಕೆಲ ಬದಲಾವಣೆ ಹಾಗೂ ಕೆಲ ಸಲಹೆ ಪಡೆಯುವ ಮೂಲಕ ಔಷಧರಹಿತವಾಗಿ ಜೀವನ ಸಾಗಿಸಬಹುದು ಎಂದು ಹೇಳಿದರು.

ದಶಕದಿಂದ ಪೌಷ್ಟಿಕಾಂಶ ಮತ್ತು ಜೀವನಶೈಲಿ ತರಬೇತಿ ಒದಗಿಸುತ್ತಿರುವ ನಮ್ಮ ಸಂಸ್ಥೆ, ವಿಭಿನ್ನ ಪ್ರಯತ್ನಗಳೊಂದಿಗೆ ಭರವಸೆ ಮೂಡಿಸಿದೆ. ವಿಶ್ವಾಸಾರ್ಹ, ಕೈಗೆಟುಕುವ ದರದಲ್ಲಿ ಮತ್ತು ಸರಳವಾದ ಪರಿಹಾರ ಈಗ ವೆಬ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಎಲ್ಲರಿಗೂ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಕರನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದು, ಕಾಯಿಲೆಗಳು ಬರುವ ಮುನ್ನವೇ ಅವುಗಳನ್ನು ಬಾರದಂತೆ ತಡೆಗಟ್ಟಿದರೆ ಉತ್ತಮ. ಆರೋಗ್ಯ ಸಮಸ್ಯೆ ಬಗ್ಗೆ ತನಿಖೆ ನಡೆಸಿ ಮರುಕಳಿಸದಂತೆ ಸಲಹೆ ಸೂಚನೆ ನೀಡುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಥಿಂಕ್ ಫಿಟ್ ಕೆಲಸ ಮಾಡುತ್ತಿದ್ದು, ಎಲ್ಲರೂ ಇದರ ಸದುಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯ ಅಧಿಕಾರಿ ಪ್ರಕಾಶ್, ಜಯಂತಿ, ಕಾವ್ಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net