ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಪೂರಕ

20 HBD 1
ಹುಮನಾಬಾದ ತಾಲೂಕಿನ ಕಟ್ಟಳ್ಳಿಯಲ್ಲಿ ಶನಿವಾರ ಕ್ರಿಕೆಟ್ ಪಂದ್ಯಾವಳಿಗೆ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಚಾಲನೆ ನೀಡಿ ಮಾತನಾಡಿದರು. ಶಿವರಾಜ ಪಾಟೀಲ, ಲಕ್ದ್ಮಣ ಜಮಾದಾರ, ಬಸವರಾಜ ಪಾಟೀಲ್, ಜಗನ್ನಾಥ ನೌಲೆ, ಅನಿಲ ದೊಡ್ಡಿ, ಸಂಗಮೇಶ ಬಿರಾದಾರ, ವೀರೇಶ ಶೇರಿಕಾರ, ಈಶ್ವರ ಕ್ರಾಂತಿ ಇತರರಿದ್ದರು.
Published on

ಹುಮನಾಬಾದ್:  ಯುವಕರು ದುಶ್ಚಟ ಸೇರಿ ಮೊಬೈಲ್ ದಾಸರಾಗಿ ಆರೋಗ್ಯ ಕೆಡಿಸಿಕೊಳ್ಳದೆ, ಕ್ರಿಕೆಟ್, ಕಬಡ್ಡಿ, ಖೋಖೋ ಸೇರಿ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕೆಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಹೇಳಿದರು.

ಕಟ್ಟಳ್ಳಿ ಗ್ರಾಮದಲ್ಲಿ ಶನಿವಾರ ದಿ.ಮಾಜಿ ಸಚಿವ ಬಸವರಾಜ ಪಾಟೀಲ್ ಅಭಿಮಾನಿಗಳಿಂದ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಮಾಡಿ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯಕರ ಜೀವನಕ್ಕೆ ಕ್ರೀಡೆ ಅತ್ಯವಶ್ಯ. ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪಾಲಕರು ಸಹಕರಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡೆಗಳು ಆಯೋಜಿಸಿ ನಡೆಸಿದರೆ ಅದಕ್ಕೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಯುವ ಮುಖಂಡ ಅನಿಲ ದೊಡ್ಡಿ ಮಾತನಾಡಿ, ಮಾಜಿ ಸಚಿವ ಬಸವರಾಜ ಪಾಟೀಲ್ ತಮ್ಮ ಆಡಳಿತ ಅವಧಿಯಲ್ಲಿ ಹುಮನಾಬಾದ್ ಕ್ಷೇತ್ರ ಮಾದರಿ ಮತಕ್ಷೇತ್ರ ಮಾಡುವ ಮೂಲಕ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅವರ ಉತ್ತಮ ಕಾರ್ಯ ವೈಖರಿಯ ಸವಿ ನೆನಪಿಗಾಗಿ ಈ ಪಂದ್ಯಾವಳಿ ಏರ್ಪಡಿಸಲಾಗಿದೆ. ಹೀಗಾಗಿ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪಂದ್ಯಾವಳಿ ಯಶಸ್ವಿ ಗೊಳಿಸಬೇಕು ಎಂದರು.

ಗ್ರಾಮದ ಪ್ರಮುಖರಾದ ಶಿವರಾಜ ಪಾಟೀಲ, ಲಕ್ಷ್ಮಣ ಜಮಾದಾರ, ಬಸವರಾಜ ಪಾಟೀಲ್, ಜಗನ್ನಾಥ ನೌಲೆ, ಸಂಗಮೇಶ ಬಿರಾದಾರ, ವೀರೇಶ ಶೇರಿಕಾರ, ಈಶ್ವರ ಕ್ರಾಂತಿ, ಬಸವರಾಜ ಭೂತಾಳೆ, ರಾಜಕುಮಾರ ಭೂತಾಳೆ, ಅರುಣ, ಬಸವರೆಡ್ಡಿ ಬಿರಾದಾರ, ಈಶ್ವರ ಬಿರಾದಾರ, ಹಣಮಂತ ಭೂತಾಳೆ, ಆಕಾಶ ದೊಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net