ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

bdr6
ಚಿಟಗುಪ್ಪ ತಾಲೂಕಿನ ಚಾಂಗಲೇರದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರೋತ್ಸವ ನಿಮಿತ್ತ ಬುಧವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಬಸವಕಲ್ಯಾಣ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಮುಕುಲï ಜೈನ್ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಘಾಳೆಮ್ಮ ಹಸರಗುಂಡಗಿ, ಉಪಾಧ್ಯP್ಷÀ ಈರಪ್ಪ ಪೂಜಾರಿ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ ಕುಲಕರ್ಣಿ ಇತರರಿದ್ದರು.
Published on

ಚಿಟಗುಪ್ಪ: ಯುವ ಜನತೆ ದುಶ್ಚಟಗಳಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೇಹ ಸದೃಢಗೊಳಿಸಿಕೊಳ್ಳಬೇಕು ಎಂದು ಬಸವಕಲ್ಯಾಣ ಸಹಾಯಕ ಆಯುಕ್ತರು ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಮುಕುಲï ಜೈನ್ ಹೇಳಿದರು.

ಸುಕ್ಷೇತ್ರ ಚಾಂಗಲೇರದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರೋತ್ಸವ ನಿಮಿತ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಇಂದಿನ ಯುವಕರು ದುಶ್ಚಟಗಳ ದಾಸರಾಗಿ ಆರೋಗ್ಯ, ಸಮಯ ವ್ಯರ್ಥ ಮಾಡಿಕೊಳ್ಳುತ್ತಿರುವುದು ಕಾಣುತ್ತಿz್ದೆÃವೆ. ಇವುಗಳಿಂದ ಮುಕ್ತಿ ಪಡೆಯಲು ಕ್ರಿಕೆಟ್ ಸೇರಿ ನಾನಾ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಘಾಳೆಮ್ಮ ಹಸರಗುಂಡಗಿ, ಉಪಾಧ್ಯP್ಷÀ ಈರಪ್ಪ ಪೂಜಾರಿ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ ಕುಲಕರ್ಣಿ, ಕಾರ್ಯದರ್ಶಿ ಸಂಜುರಾವ ದೇಸಾಯಿ, ಪ್ರಮುಖರಾದ ವಿಜಯಕುಮಾರ ವಾಲಿ, ರಾಮಲು ಮಂತ್ರಿ, ನರೇಶ ಥೊಂಟೆ, ವಿ.ಕೆ.ಪೂಜಾರಿ, ರವಿ ಘಾರೇಲï, ರಾಮಯ್ಯ ಶಾಸ್ತಿç, ರಮೇಶ ಗೌಳಿ, ಸಿರಗಪ್ಪನೂರ, ವೀರಶೆಟ್ಟಿ ಧನಗರ, ಪ್ರಸನ್ನ ಪಾಟೀಲï, ಗಿರೀಶ, ರಮೇಶ ಭವಾನಿ, ರಾಮ ದರ್ಜಿ ಇತರರಿದ್ದರು.

ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ನವೆಂಬರ್1ರೊಳಗೆ ಪ್ರವೇಶ ಶುಲ್ಕ 1501 ರೂ. ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರಥಮ ಬಹುಮಾನ 41 ಸಾವಿರ ರೂ., ದ್ವಿತೀಯ 21,551ರೂ. ಹೆಚ್ಚಿನ ಮಾಹಿತಿಗೆ ಮೊಬೈಲï 7259338160, 8197192943, 9916535103 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net