ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ; ಬೆಸ್ಕಾಂ ಮುಖ್ಯ ಇಂಜಿನಿಯರ್ ಪ್ರಸನ್ನ ಅಭಿಪ್ರಾಯ

09 Nela ph 01 Bescom criket turnament winners
Published on

ನೆಲಮಂಗಲ: ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು, ಸಿಬ್ಬಂದಿ ಉತ್ತಮ ಆರೋಗ್ಯ ಕಾಪಾಡಿಕೊಂಡಲ್ಲಿ ಹೆಚ್ಚಾಗಿ ಸಾರ್ವಜನಿಕರ ಸೇವೆ ಮಾಡಬಹುದಾಗಿದೆ ಎಂದು ಬೆಸ್ಕಾಂ ಮುಖ್ಯ ಇಂಜಿನಿಯರ್ ಪ್ರಸನ್ನ ಅಭಿಪ್ರಾಯಪಟ್ಟರು.

ತಾಲೂಕಿನ ಮಹದೇವಪುರ ಬಳಿ ಆದಿತ್ಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ನಿಯಮಿತದಿಂದ ಶನಿವಾರ ಆಯೋಜಿಸಿದ್ದ ಬೆಸ್ಕಾಂ ಅಧಿಕಾರಿ ನೌಕರರು ಹಾಗೂ ಗುತ್ತಿಗೆದಾರರ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು.

ನಿತ್ಯ ವ್ಯಾಯಾಮ, ಯೋಗಭ್ಯಾಸ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯದಲ್ಲಿ ಸಮತೋಲನೆ ಕಾಯ್ದುಕೊಳ್ಳಬಹುದಾಗಿದೆ. ಪಂದ್ಯಾವಳಿಗಳಿಂದ ಅಧಿಕಾರಿ ಸಿಬ್ಬಂದಿ ನಡುವಿನ ಅಂತರ ಕಡಿಮೆಯಾಗಿ ಸಾಮರಸ್ಯ ವೃದ್ಧಿಯಾಗಲಿದೆ ಎಂದರು.

ಬೆಂಗಳೂರು ವಲಯ ಬೆಸ್ಕಾಂ ಮುಖ್ಯಅಧೀಕ್ಷಕ ಶಿವರಾಮೇಗೌಡ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಆದರೆ ಭಾಗವಹಿಸುವಿಕೆ, ಉತ್ಸಾಹ ಮುಖ್ಯ ಎಂದು ತಿಳಿಸಿದರು.

ಎರಡು ದಿನಗಳ ಕಾಲ ನಡೆದ ಟೆನ್ನಿಸ್‌ಬಾಲ್, ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಸ್ಕಾಂ ಅಧಿಕಾರಿ ಸಿಬ್ಬಂದಿ 12 ತಂಡ ಭಾಗವಹಿಸಿದ್ದು, ವಿದ್ಯುತ್ ಗುತ್ತಿಗೆದಾರರ 2 ತಂಡಗಳ ಭಾಗವಹಿಸಿದ್ದವು. ಅಂತಿಮ ಸುತ್ತಿನ ಪಂದ್ಯಾವಳಿಯಲ್ಲಿ ಬೆಸ್ಕಾಂ ಅಧಿಕಾರಿ ದೀಪಕ್ ನೇತೃತ್ವದ ತಂಡ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 49ರನ್ ಗಳಿಸಿತ್ತು, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಮಂಜುನಾಥ್ ನೇತೃತ್ವದ ತಂಡ 6 ಒವರ್ 4 ವಿಕೆಟ್ ನಷ್ಟಕ್ಕೆ 50 ಗಳಿಸಿದ್ದು ಪ್ರಥಮ ಬಹುಮಾನ ಪಡೆದುಕೊಂಡರು.

ಪ್ರಥಮಬಹುಮಾನವಾಗಿ 10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ‌್ಸ ತಂಡಕ್ಕೆ 5 ಸಾವಿರ ನಗದುಬಹುಮಾನ ಮತ್ತು ಟ್ರೋಫಿ ನೀಡಲಾಯಿತು.

ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಬಿ.ಟಿ.ಗಂಗರಾಜು, ಸಹಾಯಕ ಅಭಿಯಂತರ ಮಲ್ಲಿಕಾರ್ಜುನ್, ದೀಪಕ್, ವಿಜಯ್‌ಕತ್ತಿ ಆಯೋಜಕರಾಗಿದ್ದರು. ಬೆಸ್ಕಾಂ ನೌಕರರ ಸಂಘದ ಮಾಜಿ ಅಧ್ಯಕ್ಷ ಮುನಿಆಂಜಿನಪ್ಪ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಮಂಜುನಾಥ್, ಉಪಾಧ್ಯಕ್ಷ ರಾಜಣ್ಣ, ಜಿ.ಎನ್.ನಾಗರಾಜು, ಖಜಾಂಚಿ ಕೃಷ್ಣಪ್ಪ, ಕಾರ್ಯದರ್ಶಿ ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ಜಿ.ಮಾರಯ್ಯ, ಸಹಕಾರ್ಯದರ್ಶಿ ಹೊನ್ನಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net