ಉತ್ತಮ ಆರೋಗ್ಯಕ್ಕಾಗಿ ಯೋಗ ಅಗತ್ಯ

bhr yoga
Published on

ಬಾಳೆಹೊನ್ನೂರು: ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡುವುದು ಅಗತ್ಯ ಎಂದು ಚಿಕ್ಕಮಗಳೂರು ಪತಂಜಲಿ ಯೋಗ ಕೇಂದ್ರದ ಯೋಗ ತಜ್ಞೆ ಸುಮಿತ್ರಾ ಹೇಳಿದರು.

ಬೈರವಿ ಮಹಿಳಾ ಒಕ್ಕಲಿಗರ ಸಂಘ ಶನಿವಾರ ಆಯೋಜಿಸಿದ್ದ ಯೋಗ ದಿನಾಚರಣೆ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆರೋಗ್ಯವಿದ್ದಲ್ಲಿ ಸಕಲ ಐಶ್ವರ್ಯಗಳು ದೊರೆಯಲಿವೆ. ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದರು.

ಬೈರವಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಸಿ.ಟಿ.ರೇವತಿ ಮಾತನಾಡಿ, ಇಂದಿನ ಆಹಾರ ಪದ್ಧತಿಯಿಂದ ರೋಗಗಳು ಉಲ್ಬಣಿಸುತ್ತಿದ್ದು, ಇವುಗಳ ನಿವಾರಣೆಗಾಗಿ ನಿತ್ಯ ಯೋಗಾಭ್ಯಾಸ ಮಾಡಬೇಕು ಎಂದರು.

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಶ್ರೇಷ್ಠ ಆಡಳಿತಗಾರ. ಬೆಂಗಳೂರು ಈಗ ವಿಶ್ವದಲ್ಲಿಯೇ ವಿಶೇಷ ಸ್ಥಾನಮಾನ ಪಡೆಯಲು ಕೆಂಪೇಗೌಡರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಯೋಗ ತಜ್ಞೆ ಮಂಗಳಾ, ಒಕ್ಕಲಿಗರ ಮಹಿಳಾ ಸಂಘದ ಕಾರ್ಯದರ್ಶಿ ಪ್ರೀತಿ, ಖಜಾಂಚಿ ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net