

ಕಲಬುರಗಿ: ವಿದ್ಯಾರ್ಥಿಗಳು ಕೇವಲ ಅಂಕಗಳಿಸುವುದಕ್ಕಾಗಿ ಅಭ್ಯಾಸ ಮಾಡದೆ, ಉತ್ತಮ ಜ್ಞಾನ ಸಂಪಾದನೆಯೊಂದಿಗೆ ಒಳ್ಳೆಯ ಸಮಾಜ ನಿರ್ಮಿಸುವುದಕ್ಕೆ ಶ್ರಮಿಸಬೇಕು ಎಂದು ಪಾಳಾದ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯರು ಹೇಳಿದರು.
ಪಾಳಾದ ಕಟ್ಟಿಮನಿ ಹಿರೇಮಠದಲ್ಲಿ ಅಖಿಲ ಭಾರತ ಯುವಜನ ಒಕ್ಕೂಟ ಹಾಗೂ ಸ್ನೇಹ ಸಂಗಮ ವಿವಿದೋದ್ದೇಶ ಸೇವಾ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ``ನಿರ್ಭಯ ಸಾಧಕ'' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಅಂಕ ಪಡೆದು ನೌಕರಿಗಿಟ್ಟಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಉತ್ತಮ ಸಂಸ್ಕಾರದ ಕೊರತೆಯಿಂದ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ ಚವ್ಹಾಣ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಯಾವುದೇ ಪ್ರತಿಫಲ ಆಪೇಕ್ಷಿಸದೆ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸುತ್ತಿರುವ ಸ್ನೇಹ ಸಂಗಮದ ಕಾರ್ಯ ಶ್ಲಾಘನೀಯ. ಮಾತುಗಳು ಮುಳ್ಳಿನಂತಿದ್ದರೂ, ಅವು ಮತ್ತೊಬ್ಬನನ್ನು ಎಚ್ಚರಿಸಿ ಸರಿ ದಾರಿಗೆ ತರುವ ಗಡಿಯಾರದ ಮುಳ್ಳಾಗಬೇಕೆ ವಿನಃ ಮನಸ್ಸನ್ನು ಚುಚ್ಚುವ ಮುಳ್ಳಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಘದ ಅಧ್ಯಕ್ಷ ಹಣಮಂತರಾಯ ಅಟ್ಟೂರ ಮಾತನಾಡಿದರು. ಪಾಳಾದ ಸಕರ್ಾರಿ ಪ್ರೌಢಶಾಲೆ ಮುಖ್ಯಗುರು ಮಾರುತಿ ಹುಜರಾತಿ, ಸಕರ್ಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ನಾಗಲಾಂಬಿಕಾ ಮಾತನಾಡಿದರು.
ಎಸ್ಸೆಸ್ಸೆಲ್ಸಿಯ ಕೀರ್ತಿ ಶಿವಪುತ್ರ, ಪೂಜಾ, ಅಂಕಿತಾ, ಪವಿತ್ರಾ, ಕೀತರ್ಿ, ಈಶ್ವರ ಮಾರುತಿ ಹಾಗೂ ದ್ವಿತೀಯ ಪಿಯುಸಿಯ ಪೂಜಾ ಜಿ. ಕಲಶೆಟ್ಟಿ, ಅಂಕಿತಾ ಜಿ., ಶ್ವೇತಾ ಅವರಿಗೆ ನಿರ್ಭಯ ಸಾಧಕರು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂತೋಷ ಅಡೆ, ರಘುನಂದನ ಕುಲಕರ್ಣಿ , ಸಂಗಮೇಶ ಸಿ. ಪಾಟೀಲ್, ಶಿವರುದ್ರ ಕರಿಕಲ್, ಸಾಯಬಣ್ಣ ಬೆಳಮ್, ಮಲಕಾರಿ ಪೂಜಾರಿ, ರಾಜಶೇಖರ ಪಾಟೀಲ್, ಕಲ್ಯಾಣರಾವ ಮುರುಡ, ರಾಜು ಹೆಬ್ಬಾಳ, ಮಧುಸೂಧನ ಕುಲಕರ್ಣಿ , ಕಿರಣ ಕುಲಕರ್ಣಿ , ಯಲ್ಲಾಲಿಂಗ ಪೂಜಾರಿ, ಸಂಗಣಗೌಡ ಸರಡಗಿ, ಮಲ್ಲಮ್ಮ ಎಸ್. ಹಿರೇಮಠ, ಗೀತಾ ಭರಣಿ, ಮಲ್ಲಿಕಾರ್ಜುನ ಭಜಂತ್ರಿ, ರಾಜಶೇಖರ ದಬಾಡೆ, ವಿದ್ಯಾವತಿ, ಕಾವೇರಿ ಕಾಂಬಳೆ, ಸರಿತಾ, ಸಂತೋಷ ಸಾಹು, ಬಾಪುಗೌಡ, ಮಾಲಿಪಾಟೀಲ್, ಪ್ರವೀಣ ಆಡೆ, ಶಾಂತಪ್ಪ ಬನ್ನೂರ, ನಾನಾಗೌಡ ಪೊಲೀಸ್ ಪಾಟೀಲ್, ಕರಬಸಯ್ಯ ಮಠಪತಿ ಇದ್ದರು.