ಉತ್ತಮ ಹವ್ಯಾಸ ಬೆಳೆಸಿಕೊಳ್ಳಿ

ಹುನಗುಂದ ಸರ್ಕಾರಿ ಪಪೂ ಕಾಲೇಜಿನಲ್ಲಿ ವ್ಯಸನಮುಕ್ತ ದಿನಾಚರಣೆ ನಡೆಯಿತು. ಪ್ರಾಚಾರ್ಯ ಎ.ಎಚ್. ಮೋಮಿನ್ ಸಿದ್ದಲಿಂಗಪ್ಪ ಬೀಳಗಿ, ಶರಣಪ್ಪ ಹೂಲಗೇರಿ ಇದ್ದರು.
ಹುನಗುಂದ ಸರ್ಕಾರಿ ಪಪೂ ಕಾಲೇಜಿನಲ್ಲಿ ವ್ಯಸನಮುಕ್ತ ದಿನಾಚರಣೆ ನಡೆಯಿತು. ಪ್ರಾಚಾರ್ಯ ಎ.ಎಚ್. ಮೋಮಿನ್ ಸಿದ್ದಲಿಂಗಪ್ಪ ಬೀಳಗಿ, ಶರಣಪ್ಪ ಹೂಲಗೇರಿ ಇದ್ದರು.
Published on

ಹುನಗುಂದ: ಒಳ್ಳೆಯ ಹವ್ಯಾಸ ಹೊಂದಿದ ವ್ಯಕ್ತಿಯಲ್ಲಿ ಮಾತ್ರ ಸಮಾಜಮುಖಿ ಆಲೋಚನೆಗಳಿರಲು ಸಾಧ್ಯ ಎಂದು ಉಪನ್ಯಾಸಕ ಶರಣಪ್ಪ ಹೂಲಗೇರಿ ಹೇಳಿದರು.

ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಹವ್ಯಾಸದಿಂದ ಬದುಕು ಹಸನಾದರೆ ವ್ಯಸನದಿಂದ ಜೀವನದುದ್ದಕ್ಕೂ ಗೋಳು ಅನುಭವಿಸಬೇಕಾಗುತ್ತದೆ. ವ್ಯಕ್ತಿ ದುಶ್ಚಟದ ದಾಸನಾದರೆ ಸದ್ದಿಲ್ಲದೆ ಅವನ ಜೀವನ ಮತ್ತು ಇಡೀ ಕುಟುಂಬ ಹಾಳಾಗುವುದಲ್ಲದೆ, ಅಂತಹ ವ್ಯಕ್ತಿ ಸಮಾಜದ ಅಪಹಾಸ್ಯಕ್ಕೀಡಾಗುವನು. ಸದೃಢ ಸಮಾಜ ನಿರ್ಮಾಣದ ಆದ್ಯತೆಯೊಂದಿಗೆೆ ಸಮಾಜೋದ್ಧಾರದ ಕನಸು ಹೊಂದಿದ್ದ, ಮಹಾಂತ ಜೋಳಿಗೆಯ ಹರಿಕಾರರಾಗಿದ್ದ ಡಾ. ಮಹಾಂತ ಶ್ರೀಗಳ ವ್ಯಸನಮುಕ್ತ ಸಮಾಜದ ಕನಸು ನನಸು ಮಾಡುವ ಅಗತ್ಯವಿದೆ ಎಂದರು.

ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಎ.ಎಚ್. ಮೋಮಿನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಮಹಾಂತ ಶ್ರೀಗಳ ದೂರದೃಷ್ಟಿಯ ನಿಲುವುಗಳು ಉತ್ತಮ ಸಮಾಜ ನಿರ್ಮಾಣಕ್ಕೆ ತುಂಬ ಸಹಕಾರಿಯಾಗಲಿವೆ. ನಾವೆಲ್ಲ ನಿತ್ಯ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು. ಉಪನ್ಯಾಸಕ ಎಚ್.ಟಿ. ಅಗಸಿಮುಂದಿನ ಮಾತನಾಡಿದರು.

ಕಾಲೇಜಿನ ಎಲ್ಲ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಾನಸ ಗಾಣಿಗೇರ ಪ್ರಾರ್ಥಿಸಿದರು. ಉಪನ್ಯಾಸಕ ವಿ.ಕೆ. ಶಶಿಮಠ ಸ್ವಾಗತಿಸಿದರು. ಛಾಯಾ ಪುರಂದರೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಎನ್.ವೈ. ನದ್ಾ ನಿರೂಪಿಸಿದರು. ಮಹಮ್ಮದ್ ಖದೀರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net