ಉಣ್ಣಕ್ಕಿ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

bnk vikasa
ಮೂಡಿಗೆರೆ ತಾಲೂಕು ಬಿ.ಹೊಸಳ್ಳಿಯಲ್ಲಿ ಉಣ್ಣಕ್ಕಿ ಜ್ಞಾನ ವಿಕಾಸ ಕೇಂದ್ರ ಉದ್ಘಾಟಿಸಲಾಯಿತು. ಗ್ರಾಪಂ ಅಧ್ಯಕ್ಷೆ ಶಶಿಕಲಾ, ಶಶಿಧರ್, ಭವಾನಿ, ಕೋಮಲಾ ಇತರರಿದ್ದರು.
Published on

ಬಣಕಲ್: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮೂಡಿಗೆರೆ ತಾಲೂಕಿನ ಬಿ.ಹೊಸಳ್ಳಿಯಲ್ಲಿ ಉಣ್ಣಕ್ಕಿ ಜ್ಞಾನ ವಿಕಾಸ ಕೇಂದ್ರ ಉದ್ಘಾಟಿಸಲಾಯಿತು.

ಬಾನಳ್ಳಿ ಶಾಲೆ ಶಿಕ್ಷಕ ಅಶೋಕ್ ಮಾತನಾಡಿ, ಮಹಿಳೆ ಅಬಲೆಯಲ್ಲ. ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಧರ್ಮಸ್ಥಳ ಯೋಜನೆ ಸಹಕಾರಿಯಾಗುತ್ತಿದೆ ಎಂದರು. ಗ್ರಾಪಂ ಅಧ್ಯಕ್ಷೆ ಶಶಿಕಲಾ, ಮುಖಂಡರಾದ ರವಿಶಂಕರ್, ಶಶಿಧರ್, ಒಕ್ಕೂಟದ ಅಧ್ಯಕ್ಷೆ ಭವಾನಿ, ಗ್ರಾಪಂ ಸದಸ್ಯೆ ಕೋಮಲಾ, ಒಕ್ಕೂಟದ ಪದಾಧಿಕಾರಿಗಳು, ಜ್ಞಾನ ವಿಕಾಸ  ಸಮನ್ವಯಾಧಿಕಾರಿ, ವಲಯದ ಮೇಲ್ವಿಚಾರಕರು, ಕಾರ್ಯಕ್ಷೇತ್ರದ ಸೇವಾದಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net