ಉಣಕಲ್ ಸಿದ್ಧಪ್ಪಜ್ಜನವರ ವಿಜೃಂಭಣೆಯ ರಥೋತ್ಸವ

h17-Siddappajja 2
Published on

ಹುಬ್ಬಳ್ಳಿ: ಶ್ರೀ ಸದ್ಗುರು ಸಿದ್ಧಪ್ಪಜ್ಜನವರ 99ನೇ ಪುಣ್ಯಾರಾಧನೆ ನಿಮಿತ್ತ ಉಣಕಲ್ ಸಾಯಿ ನಗರ ರಸ್ತೆಯ ಶ್ರೀ ಸಿದ್ಧಪ್ಪಜ್ಜನವರ ಮೂಲಗದ್ದುಗೆಯ ಮಠದ ಆವರಣದಲ್ಲಿ ಶುಕ್ರವಾರ ಸಂಜೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು.

‘ಶ್ರೀ ಸಿದ್ಧಪ್ಪಜ್ಜ ಮಹಾರಾಜ್ಕೀ ಜೈ’ ಎಂದು ಜಯಘೊಷ ಮೊಳಗಿಸಿದ ಭಕ್ತರು, ರಥದ ಮಿಣಿ ಎಳೆದರು. ಸಾಯಿ ನಗರ ರಸ್ತೆಯ ದಾರಿಯುದ್ದಕ್ಕೂ ಸಾಗಿದ ರಥಕ್ಕೆ ಭಕ್ತರು, ಉತ್ತತ್ತಿ ಎಸೆದು ಭಕ್ತಿ ಮೆರೆದರು. ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ರಥೋತ್ಸವಕ್ಕೆ ಮೊದಲು ಶ್ರೀಮಠದಿಂದ ಜಾಂಜ್, ವಾದ್ಯ, ಭಜನೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು. ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು, ಸಿದ್ಧಪ್ಪಜ್ಜಗೆ ಕಾಯಿ, ಕರ್ಪರ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net