ಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಪ್ರತಿಭಟನೆಗೆ ಅನುಮತಿ ನಿರಾಕರಣೆ

Published on

ವಿಜಯವಾಣಿ ಸುದ್ದಿಜಾಲ ಉಡುಪಿ

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಶಾಹಿನ್‌ ಬಾಗ್‌ ಮಾದರಿಯ ಪ್ರತಿಭಟನೆಗೆ ಪೊಲೀಸರು ಅನುಮತಿ‌ ನಿರಕರಿಸಿದ್ಧಾರೆ.ನಗರ ಮದ್ಯೆ ಖಾಸಗಿ ಸ್ಥಳದಲ್ಲಿ ಫೆ. 22, ಸಾಯಂಕಾಲ 5 ಗಂಟೆಯಿಂದ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು. ಕಾನೂನು ಸುವ್ಯವಸ್ಥೆ ಕಾರಣ ನೀಡಿ ಪೊಲೀಸರು ಅನುಮತಿ ನೀಡಿಲ್ಲ . ಪ್ರತಿಭಟನೆ ಅಯೋಜಿಸಲು ನಿರ್ಧರಿಸಲಾಗಿದ್ದ ಸ್ಥಳದಲ್ಲಿ ಶಾಮಿಯಾನ ಹಾಕಿದ್ದರು. ಸ್ಥಳಕ್ಕೆ ವೃ

ತ್ತ ನಿರೀಕ್ಷಕ ಮಂಜುನಾಥ್ ಆಗಮಿಸಿ ಆಯೋಜಕರಿಗೆ ಶಾಮಿಯಾನ ತೆರವುಗೊಳಿಸಿ,‌ ಪ್ರತಿಭಟನೆ ನಡೆಸದಂತೆ ಸೂಚಿಸಿದರು.‌ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net