ಉಡುಪಿ ನಗರದಲ್ಲಿ ಕಾರುಗಳ ಗ್ಲಾಸ್ ಒಡೆದು ಸರಣಿ ಕಳ್ಳತನ

Published on


ಉಡುಪಿ: ಉಡುಪಿ ನಗರದಲ್ಲಿ ರಾತ್ರಿವೇಳೆ ಎರಡು ಕಾರುಗಳ ಗ್ಲಾಸ್ ಒಡೆದು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ ಘಟನೆ ವರದಿಯಾಗಿದೆ. ಗುರುವಾರ 5 ರಿಂದ 7:30 ಸಮಯದ ಒಳಗೆ ಸಿಟಿ ಬಸ್ ನಿಲ್ದಾಣದ ಬಳಿ ರಾಜ್ಟವರ್ಸ್ ಸಮೀಪ ಕೊರಂಗ್ರಪಾಡಿ ನಿವಾಸಿ ರಕ್ಷಾ ಯು ಎಂಬವರ ಸ್ವಿಫ್ಟ್ ಕಾರಿನ ಎಡಬದಿಯ ಗ್ಲಾಸ್‌ನ್ನು  ಒಡೆದು ಎಸರ್ ಕಂಪೆನಿಯ 25 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಕಳವು ಮಾಡಲಾಗಿದೆ. ಇದೇ ರೀತಿ ಮಣಿಪಾಲ ಕೆಎಂಸಿ ಡಾ.ನಮನ್ ಅಗರ್ವಾಲ್ ಎಂಬವರ ಬೃಂದಾವನ ಸರ್ಕಲ್, ಗ್ಲಾಸ್‌ಹೌಸ್ ಎದುರಿಗೆ ನಿಲ್ಲಿಸಿದ್ದ ಬಲೆನೋ ಕಾರಿನ ಎಡಬದಿಯ ಕಾರಿನ ಗ್ಲಾಸನ್ನು ಒಡೆದು ಲೆನೋವ ಕಂಪೆನಿಯ 70 ಸಾವಿರ ರೂ., ಮೌಲ್ಯದ ಲ್ಯಾಪ್‌ಟಾಪನ್ನು ಕಳವು ಮಾಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net