ಉಡುಪಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದು, ಉಡುಪಿ ಜಿಲ್ಲೆಯಲ್ಲಿಯೂ ಕೆಎಸ್‌ಆರ್‌ಟಿಸಿ ಬಸ್ಸು ಸೇವೆ ಸಂಪೂರ್ಣ ಸ್ತಬ್ಧಗೊಂಡಿದೆ.ಉಡುಪಿ ಡಿಪೋ 108 ಬಸ್ಸುಗಳು, ಕುಂದಟಪುರ ಡಿಪೋ 120 ಬಸ್ಸು ನಿಲುಗಡೆಯಾಗಿವೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಸ್ಸುಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಜಿಲ್ಲೆಯಲ್ಲಿ ಪರ್ಯಾಯವಾಗಿ ಖಾಸಗಿ ಬಸ್ಸು ಸೇವೆ ಪ್ರಮಾಣ ಹೆಚ್ಚಿಗೆ ಇರುವುದರಿಂದ ಮುಷ್ಕರ ಬಿಸಿ ತಟ್ಟಿಲ್ಲ. ಉತ್ತರಕನ್ನಡ ಜಿಲ್ಲೆ ಶಿರಸಿ, ಕುಮುಟ, ಹುಬ್ಬಳ್ಳಿ ಕಡೆಗೆ ಸಂಚರಿಸುವ ಪ್ರಯಾಣಕರಿಗೆ ಸಮಸ್ಯೆಯಾಗಿತ್ತು. ಉಡುಪಿ ಡಿಪೋ ಕೆಎಸ್‌ಆರ್‌ಟಿಸಿ ಎಲ್ಲಾ 55 ರೂಟ್ ಬಸ್ಸುಗಳು, ಕುಂದಾಪುರ ಡಿಪೋ 45 ರೂಟ್ ಬಸ್ಸುಗಳು ಡಿಪೋದಲ್ಲಿ ನಿಲುಗಡೆಗೊಂಡಿದ್ದು, ಎಲ್ಲಾ 380 ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.