ಉಚ್ಚಂಗಿಯಲ್ಲಮ್ಮ ದೇವಿಗೆ ಹಣ್ಣಿನಾಲಂಕಾರ

Ucchhangi Yallamma Devi
Published on

ಚಿತ್ರದುರ್ಗ: ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಕೋಟೆ ರಸ್ತೆಯ ಉಚ್ಚಂಗಿಯಲ್ಲಮ್ಮ ದೇವಿಗೆ ಅನಾನಸ್, ಸೇಬು, ದ್ರಾಕ್ಷಿ, ಕಿತ್ತಳೆ, ಕಬ್ಬು ಸೇರಿ ಇತರೆ ಹಣ್ಣುಗಳಿಂದ ಸಿಂಗರಿಸಲಾಗಿತ್ತು.

ಜಿಲ್ಲೆಯ ಹಲವು ಗ್ರಾಮೀಣ ಭಾಗಗಳಲ್ಲಿ ರೈತರು ತಾವು ಬೆಳೆದ ರಾಶಿಯನ್ನು ಗುಡ್ಡೆಯಾಕಿ ವಿಶಿಷ್ಟವಾಗಿ ಸಂಕ್ರಾಂತಿ ಹಬ್ಬ ಆಚರಿಸುವ ಪರಂಪರೆ ಇದೆ. ಬರಗಾಲದ ಕಾರಣಕ್ಕೆ ಕೈಸೇರಿದ ಬೆಳೆಯನ್ನೇ ರಾಶಿಯಾಕಿ, ರಾಸುಗಳಿಗೆ ವಿವಿಧ ವಸ್ತುಗಳಿಂದ ಸಿಂಗರಿಸಿ ಆಚರಿಸಿದ್ದು, ವಿವಿಧೆಡೆ ಕಂಡು ಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net