ಉಚಿತವಾಗಿ ಆಕ್ಸಿಜನ್ ವ್ಯವಸ್ಥೆ

28 Jaggu 14-Web
ಬೆಳಗಾವಿಯ ಕ್ರೀಡಾ ಹಾಸ್ಟೆಲ್ ಬಳಿ 25 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌ಗೆ ಚಾಲನೆ ನೀಡಿದ ಬಳಿಕ ಸಂಸದೆ ಮಂಗಲ ಅಂಗಡಿ ಮಾತನಾಡಿದರು. ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಅಶೋಕ ಬದಾಮಿ, ಡಾ. ಡಿ.ಎನ್. ಮಿಸಾಳೆ, ದೀಪಾ ಕುಡಚಿ, ಡಾ. ರಾಜು ನಾಯಿಕ್ ಇತರರಿದ್ದರು.
Published on

ಬೆಳಗಾವಿ: ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಗರದ ಕ್ರೀಡಾ ಹಾಸ್ಟೆಲ್ ಬಳಿ ಆರಂಭಿಸಲಾಗಿದ್ದ 20 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಅನ್ನು 25 ಬೆಡ್‌ಗೆ ಏರಿಸಲಾಗಿದ್ದು, ಸಂಸದೆ ಮಂಗಲ ಅಂಗಡಿ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಲ್ಲಿ ಕರೊನಾ ಸೋಂಕಿತರಿಗೆ ಉಚಿತವಾಗಿ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ರೆಡ್‌ಕ್ರಾಸ್ ಸಂಸ್ಥೆಯ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಅಶೋಕ ಬದಾಮಿ, ಡಾ. ಡಿ.ಎನ್. ಮಿಸಾಳೆ, ನಗರ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ, ಡಾ. ರಾಜು ನಾಯಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net