ಉಚಿತ ಹೇರ್ ಕಲರಿಂಗ್ ಭರ್ಜರಿ ಸ್ಪಂದನೆ

15 yerriswamy 03
Published on

ಬಳ್ಳಾರಿ : ಪ್ರತಿಷ್ಟಿತ ಹೇರ್ ಕಲರಿಂಗ್ ಕಂಪನಿ ಗಾರ್ನಿಯರ್ ವತಿಯಿಂದ ಆಯೋಜಿಸಿರುವ ಉಚಿತ ಹೇರ್ ಕಲರಿಂಗ್ ಅಭಿಯಾನ ನಗರದಲ್ಲಿ ಬುಧವಾರದಿಂದ ಆರಂಭಗೊಂಡಿತು.
ಇಲ್ಲಿನ ಎಸ್‌ಎನ್ ಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಬೆಳಗ್ಗೆ 6.30 ರಿಂದ ಆರಂಭವಾಯಿತು. ಮಧ್ಯಾಹ್ನ ಗಾಂಧಿನಗರ 1ನೇ ಕ್ರಾಸ್ ಹಾಗೂ ಸಂಜೆ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹೇರ್ ಕಲರಿಂಗ್ ಉಚಿತವಾಗಿ ಮಾಡಲಾಯಿತು.
ಅಭಿಯಾನದ ಮೊದಲ ದಿನವೇ ಉತ್ತಮ ಸ್ಪಂದನೆ ದೊರೆಯಿತು. ನೂರಾರು ಜನರು ಆಸಕ್ತಿಯಿಂದ ಅಭಿಯಾನದ ಸ್ಥಳಕ್ಕೆ ಆಗಮಿಸಿ ಗಾರ್ನಿಯರ್ ಸಂಸ್ಥೆಯ ಉಚಿತ ಹೇರ್ ಕಲರ್ ಮಾಡಿಸಿಕೊಂಡು ಸಂತಸ ವ್ಯಕ್ತಪಡಿಸಿದರು.
ಈ ಅಭಿಯಾನವು ಮೇ 31 ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ನಡೆಯಲಿದ್ದು, ಮೇ 16 ರಂದು ಬಳ್ಳಾರಿ ಯ ಬಸವವೇಶ್ವರ ನಗರ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬೆಳಗ್ಗೆ 7ರಿಂದ ಹಾಗೂ ಸಂಜೆ ಕೆಎಚ್‌ಬಿ ಕಾಲೋನಿ ಬಳಿ ಉಚಿತ ಹೇರ್ ಕಲರಿಂಗ್ ಅಭಿಯಾನ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಮೊ : 8217619092, 7996219295, 8884432680 ಕರೆ ಮಾಡಿ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net