ಉಚಿತ ಶಿಬಿರದಿಂದ ಬಡವರಿಗೆ ಅನುಕೂಲ

13ydm-1
ಯಡ್ರಾಮಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ಧರಾಮ ಸ್ವಾಮಿಗಳ ನಾಲ್ಕನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಉದ್ಘಾಟಿಸಿದರು. ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ ಇತರರಿದ್ದರು.
Published on

ಯಡ್ರಾಮಿ: ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಸಿಗಲಿ ಎಂಬ ಉz್ದೆÃಶದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದ್ದು, ಕ್ಯಾಂಪ್‌ಗಳಿAದ ಗ್ರಾಮೀಣ ಭಾಗದ ಬಡಜನತೆಗೆ ಸಾಕಷ್ಟು ಅನುಕೂಲವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ತಿಳಿಸಿದರು.

ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತ ಮಠದಲ್ಲಿ ಶ್ರೀ ಸಿದ್ಧರಾಮ ಸ್ವಾಮಿಗಳ ನಾಲ್ಕನೇ ಪುಣ್ಯಾರಾಧನೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧರಾಮ ಶ್ರೀಗಳು ಶ್ರೇಷ್ಠ ಗುರುವಾಗಿದ್ದು, ಕಷ್ಟವೆಂದು ಬಂದ ಅಸಂಖ್ಯಾತ ಭಕ್ತರ ನೋವುಗಳನ್ನು ದೂರ ಮಾಡುತ್ತಿದ್ದರು. ಪ್ರಸ್ತುತ ಪೀಠಾಧಿಪತಿ ಸಿದ್ಧಲಿಂಗ ಶ್ರೀಗಳು ವಾಗ್ಮಿಗಳಾಗಿದ್ದು, ಬಸವ ತತ್ವ ಬೋಧನೆ ಹಾಗೂ ಪ್ರಚಾರಕ್ಕೆ ಶ್ರಮಿಸುತ್ತಿದ್ದಾರೆ. ಅವರ ಮಾರ್ಗದರ್ಶನದೊಂದಿಗೆ ಎಲ್ಲರೂ ಮುನ್ನಡೆಯೋಣ ಎಂದರು.

ವಿರಕ್ತಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶ್ರೀ ಮಠದ ಭಕ್ತರ ಸಹಕಾರ ಹಾಗೂ ಹಿರಿಯ ಶ್ರೀಗಳ ಪುಣ್ಯಾರಾಧನೆ ನಿಮಿತ್ತ ಸತತ ನಾಲ್ಕನೇ ವರ್ಷ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಎಂದು ಹೇಳಿದರು.

ಸುರಪುರ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ, ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯಾಧ್ಯಕ್ಷ ರಾಜಶೇಖರ ಸೀರಿ, ತಾಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ಸಿಎಚ್‌ಒ ಡಾ.ಸಿದ್ದು ಪಾಟೀಲ್, ಟಿಎಚ್‌ಒ ಡಾ.ಉಮೇಶ ಶರ್ಮಾ, ಯಡ್ರಾಮಿ- ಜೇವರ್ಗಿ ತಾಲೂಕು ಸರ್ಕಾರಿ ಆಸ್ಪತ್ರೆ, ಯಡ್ರಾಮಿ ಖಾಸಗಿ ವೈಧ್ಯರ ಸಂಘ, ಬಿಲ್ವ ಆಸ್ಪತ್ರೆ, ತಾಲೂಕು ಮೆಡಿಕಲ್ ಅಸೋಸಿಯೇಷನ್, ಅನುಗ್ರಹ ಕಣ್ಣಿನ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಭಾಗವಹಿಸಿದ್ದರು.

ಒಟ್ಟು ೬೦೦ ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ೪೦ ಜನ ರಕ್ತದಾನ ಮಾಡಿದರು. ೨೧೦ ಜನರಿಗೆ ಕಣ್ಣಿನ ತಪಾಸಣೆ ಮಾಡಿದ್ದು, ಅದರಲ್ಲಿ ೧೦೦ ಜನರನ್ನು ಕಣ್ಣಿನ ಪೊರೆ ಶಸ್ತçಚಿಕಿತ್ಸೆಗಾಗಿ ಕಲಬುರಗಿ ಅನುಗ್ರಹ ಆಸ್ಪತ್ರೆಗೆ ಕಳುಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net