ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಹೆಚ್ಚು ನಡೆಯಲಿ

9-DVD-1
Published on

ದೇವದುರ್ಗ: ಕಣ್ಣಿನ ಪೊರೆ ಬಂದವರಿಗೆ ಶಸ್ತ್ರಚಿಕಿತ್ಸೆ ಮಾಡಿಸುವುದು ಪುಣ್ಯದ ಕೆಲಸವಾಗಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಮಾಲಿಪಾಟೀಲ್ ಮದರಕಲ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರ್ವತರೆಡ್ಡಿ ಮಾಲಿಪಾಟೀಲ್ ಫೌಂಡೇಷನ್‌ನಿಂದ ಆಯೋಜಿಸಿದ್ದ ಕಣ್ಣಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಭಾನುವಾರ ಮಾತನಾಡಿದರು. ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ಸಾಮೂಹಿಕ ವಿವಾಹ ಮಾದರಿಯಲ್ಲಿ ಕಣ್ಣಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳು ನಡೆಯಬೇಕು. ಸರ್ಕಾರ ಹಾಗೂ ದಾನಿಗಳು ಶಿಬಿರಗಳನ್ನು ಆಯೋಜಿಸುವ ಮೂಲಕ ಬಡಜನರಿಗೆ ಅನುಕೂಲ ಕಲ್ಪಿಸಬೇಕು. ಈ ಶಿಬಿರದಲ್ಲಿ ಕುಷ್ಟರೋಗಿ ಹಾಗೂ ಸ್ವಾಮೀಜಿಯೊಬ್ಬರಿಗೆ ಆಧಾರ್ ಕಾರ್ಡ್ ಇಲ್ಲದಿದ್ದರೂ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದರು.

ಡಾ.ಕೃಷ್ಣಮೋಹನ್ ಜಿಂಕಾ, ಡಾ.ಹರಿಪ್ರಸಾದ ನೇತೃತ್ವದ ವೈದ್ಯರ ತಂಡ 163 ಜನರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದರು. ಟಿಎಚ್‌ಒ ಡಾ.ಬನದೇಶ್ವರ, ಫೌಂಡೇಶನ್‌ನ ಗೌರವಾಧ್ಯಕ್ಷ ಶಶಿಕಲಾ ಪಿ.ಮಾಲಿಪಾಟೀಲ್, ನೇತ್ರಾಧಿಕಾರಿಗಳಾದ ಸುಶೀಲೇಂದ್ರ, ವಾದಿರಾಜ, ರೇಣುಕಾ, ಪ್ರಮುಖರಾದ ಬಸಪ್ಪ ಪಟ್ಟೇದ್, ಬಲವಂತರಾಯ, ತಾರಾಬೇಗಂ ಅಂಬಿಕಾ, ಹೇಮಾ, ವಿಶ್ವನಾಥ, ಉಮಾದೇವಿ, ಸಿಬ್ಬಂದಿ ಕೆಂಚರಾಜ ಕಮ್ಮಾರ, ಜಬ್ಬಾರ ರಂಜಣಗಿ, ಸಿದ್ದು, ರಮೇಶ ಕೆ.ಟಿ, ಬಸವರಾಜ ಕಪಾಲಿ, ಅಂಬರೀಶ, ಸದಾಶಿವ, ವಿನೋದ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net