

ಹಾಸನ: ರಕ್ತ ದಾನ ಶ್ರೇಷ್ಠ ದಾನವಾಗಿದ್ದು ಉಚಿತವಾಗಿ ರಕ್ತ ದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಕ್ತ ದಾನ ಮಾಡುವ ಗುಣ ನಮ್ಮಲ್ಲಿ ಇರಬೇಕು ಎಂದು ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರ್ ಟಿ ದ್ಯಾವೇಗೌಡ ಅವರು ಹೇಳಿದರು.
ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಬ್ಲ್ಲಡ್ ಕ್ಯಾಂಪ್ ಮತ್ತು ಹಾಸನ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಅಲ್ಯುಮಿನಿ ಹಾಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಉಚಿತ ರಕ್ತ ದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ನಾವು ನೀಡುವ ರಕ್ತ ಇನ್ನೊಬ್ಬರ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ. ಇಂಥ ಮಹಾಕಾರ್ಯ ಶ್ರೇಷ್ಠವಾದುದು ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಹಾಸನ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಹೆಮ್ಮಿಗೆ ಮೋಹನ್ ಮಾತಾನಾಡಿ, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷ ಹೆಚ್ಚಿನ ರೀತಿಯಲ್ಲಿ ಉಚಿತ ರಕ್ತದಾನ ಮಾಡುತ್ತಿರುವುದು ಬಹಳ ಸಂತೋಷವಾಗಿದೆ. ಸೇವಾ ಮನೋಭಾವನೆಯಿಂದ ಇಂಥ ಉಚಿತ ರಕ್ತ ದಾನ ಶಿಬಿರದಿಂದ ಬಡ ರೋಗಿಗಳಿಗೆ ಹಾಗೂ ಎಲ್ಲರ ಪ್ರಾಣ ಉಳಿಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಪಾರ್ಶ್ವನಾಥ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಷಬ್ಬಿರ್, ಖಜಾಂಚಿ ಜಲಂದರ್, ವೈ.ಎನ್. ಸುಬ್ಬಸ್ವಾಮಿ, ಅಮಜದ್ ಖಾನ್, ಜಯಪ್ರಕಾಶ್, ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಪಿ.ಸಿ. ಶ್ರೀಕಾಂತ್, ಪ್ರಾಧ್ಯಾಪಕರಾದ ಇಂದ್ರಾ ಬಹದ್ದೂರು, ವೆಂಕಟೇಶ್ ಕೊಲ್ಲಿ, ಡಾ. ಸುಷ್ಮಾ, ಡಾ.ಡಿ.ಎಸ್.ಕೀರ್ತಿ, ಡಾ ನಾಗಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.