

ಬೇಲೂರು: ಕಂಪಾನಿಯೋ ಮತ್ತು ಲಯನ್ಸ್ ಕ್ಲಬ್ ಹಾಗೂ ಸುರಭಿ ಪೌಂಡೇರ್ಷನ್ ಸಹಯೋಗದಲ್ಲಿ ಉಚಿತ ಫೂಟ್ ಪಲ್ಸ್ ಥೆರಫಿ ಚಿಕಿತ್ಸಾ ಶಿಬಿರಕ್ಕೆ ಲಯನ್ಸ್ ಕ್ಲಬ್ ಅಧ್ಯಕ್ಷ ಅಬ್ದುಲ್ ಲತೀಪ್, ಕಂಪಾನಿಯೋ ಸಂಸ್ಥೆಯ ರೋಹಿತ್‌ಶೇಟ್ಟಿ ಚಾಲನೆ ನೀಡಿದರು.
ಕಂಪಾನಿಯೋ ಸಂಸ್ಥೆಯ ಅಯೋಜಕ ರೋಹಿತ್‌ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನು?್ಯ ಅಧುನಿಕ ಕಾಯಿಲೆಯಿಂದ ವಿಪರೀತ ಔಷಧ ಮಾತ್ರೆ ತೆಗೆದುಕೊಳ್ಳುತ್ತಿರುವುದರಿಂದ ಅವರಲ್ಲಿ ರಕ್ತ ಸಂಚಾರದಲ್ಲಿ ವ್ಯತ್ಯಸವಾದ ಕಾರಣ ಹತ್ತಾರು ಕಾಯಿಲೆಗಳಿಗೆ ದಾಸರಾಗುತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪರಿಚಯಿಸಿದ ವೈದ್ಯಕೀಯವಾಗಿ ರಕ್ತ ಪರಿಚಲನೆಯಲ್ಲಿ ಸರಳ ಮತ್ತು ದೀರ್ಘಕಾಲದ ಸಮಸ್ಯೆಗಳನ್ನು ಔ?ಧ ರಹಿತವಾಗಿ ಯಾವುದೆ ಅಡ್ಡ ಪರಿಣಾಮವಿಲ್ಲದೆ ಉಚಿತ ಫೂಟ್ ಪಲ್ಸ್ ಥೆರಫಿ ಚಿಕಿತ್ಸಾ ಶಿಬಿರವನ್ನು ಬೇಲೂರಿನ ದೇವಾಂಗ ಬೀದಿಯಲ್ಲಿ ನಡೆಸಲಾಗುತ್ತಿದೆ. ಪ್ರತಿದಿನ 5 ಕಿಲೋ ಮೀಟರ್ ವಾಕ್ ರಕ್ತ ಸಂಚಾರಕ್ಕೆ ಸಹಕಾರಿಯಾಗುತ್ತದೆ. 120 ಕಾಯಿಲೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಥೆರಫಿ ಚಿಕಿತ್ಸೆ ಭಾರತದಲ್ಲಿ 360 ಶಾಖೆ ಹೊಂದಿದೆ. 2015 ರಿಂದ ಪ್ರಾರಂಭವಾದ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.
ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಅಧುನಿಕ ಕಾಯಿಲೆಗಳು ಹೆಚ್ಚಿದರೂ ಮನು?್ಯ ಕಾಯಿಲೆಗಳಿಂದ ಹೊರ ಬರುವ ಪ್ರಯತ್ನ ಮಾಡುತ್ತಿಲ್ಲ. ಉತ್ತಮ ಆಹಾರ ಪದ್ದತಿ, ಯೋಗ, ವ್ಯಾಯಾಮ ಅಳವಡಿಸಿಕೊಳ್ಳುತ್ತಿಲ್ಲ, ಇದ್ದರಿಂದಲೇ ರೋಗಗಳಿಗೆ ದಾರಿಯಾಗುತ್ತಿದೆ. ಆದ್ದರಿಂದ ಕಂಪಾನಿಯೋ ಸಂಸ್ಥೆ ಭಾರತದಲ್ಲಿ ವಿನೂತನ ಫೂಟ್ ಪಲ್ಸ್ ಥೆರಫಿ ಚಿಕಿತ್ಸಾ ವಿಧಾನಕ್ಕೆ ಮುಂದಾಗಿದೆ. ಈ ವಿಧಾನದಿಂದ ಮಧುಮೇಹ, ಸ್ನಾಯು ಸೆಳೆತ, ಬೆನ್ನುನೊವು, ಬಿಪಿ, ಊತ, ನಿದ್ರಾಹೀನತೆ, ಮಂಡಿನೋವು, ಸಂಧಿವಾತ, ಪಾರ್ಶ್ವ ವಾಯು, ಥೈರಾಯ್ಡ, ಬೊಜ್ಜು ನಿವಾರಣೆ ಹೀಗೆ ಅನೇಕ ಕಾಯಿಲೆಗಳಿಗೆ ಪರಿಣಮಕಾರಿಯಾಗಿ ಕೆಲಸ ಮಾಡುತ್ತದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಅಬ್ದುಲ್ ಲತೀಪ್, ಮಾಜಿ ಅಧ್ಯಕ್ಷರಾದ ಪೂವಯ್ಯ, ರಮೇಶ್ ಕುಮಾರ್, ಕೆ.ಎಲ್.ಸುರೇಶ್, ಮುಕ್ತಿಯಾರ್, ಕಾರ್ಯದರ್ಶಿ ವೈ.ಬಿ.ಸುರೇಶ್, ನಾಟಿ ವೈದ್ಯ ಉಮೇಶ್, ವರ್ತಕರ ಸಂಘದ ಅಧ್ಯಕ್ಷ ಗಿರಿಯಪ್ಪಶೆಟ್ಟಿ ಸೇರಿದಂತೆ ಇದ್ದರು.