ಉಚಿತ ಫುಟ್ ಪಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ

6ss2terapi padeyutiruvudu
Published on

ಶನಿವಾರಸಂತೆ: ಫುಟ್ ಪಲ್ಸ್ ಥೆರಪಿ ಚಿಕಿತ್ಸಾ ಕ್ರಮದಿಂದ ವ್ಯಕ್ತಿಯ ಅಂಗಾಲಿನಿಂದ ಹೃದಯದವರೆಗೂ ರಕ್ತ ಸಂಚಾರ ಮಾಡುವ ಮೂಲಕ ಕಾಯಿಲೆಗಳನ್ನು ದೂರ ಮಾಡುತ್ತದೆ ಎಂದು ಕಂಪಾನಿಯೋ ಸಂಸ್ಥೆ ಥೆರಪಿಯನ್ ಶಶಿಕಾಂತ್ ಪೂಜಾರಿ ಹೇಳಿದರು.

ಕೊಡಗು ಪತ್ರಕರ್ತರ ಸಂಘ ಸೋಮವಾರಪೇಟೆ ತಾಲೂಕು ಘಟಕ ಹಾಗೂ ಕಂಪಾನಿಯೋ ಸಂಸ್ಥೆ ಸಹಯೋಗದಲ್ಲಿ ಶನಿವಾರಸಂತೆ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಉಚಿತ ಫುಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫುಟ್ ಪಲ್ಸ್ ಥೆರಪಿ ಯಂತ್ರದಲ್ಲಿ ಚಿಕಿತ್ಸೆ ಪಡೆಯುವ ವ್ಯಕ್ತಿಗೆ ಅರ್ಧ ಗಂಟೆಯಲ್ಲಿ 5 ಕಿ.ಮೀ.ದೂರದವರೆಗೆ ಓಟಕ್ಕೆ ಸಮನಾಗಿರುತ್ತದೆ. ಈ ಮೂಲಕ ದೇಹದ ನರನಾಡಿಗಳಲ್ಲಿ ರಕ್ತ ಸಂಚಾರವಾಗುತ್ತದೆ. ದೇಹದಲ್ಲಿರುವ ಅಶುದ್ಧ ರಕ್ತ ಶುದ್ಧಗೊಳ್ಳುತ್ತದೆ. ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಸೊಂಟ ನೋವು, ಹಿಂಬಂದಿ ಬೆನ್ನು ನೋವು ಮುಂತಾದ ನರ ದೌರ್ಬಲ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದರು.

ಫುಟ್ ಪಲ್ಸ್ ಥೆರಪಿ ಚಿಕಿತ್ಸಾ ಕ್ರಮವನ್ನು ಭಾರತದಲ್ಲಿ 2014 ರಿಂದ ಆರಂಭವಾಗಿದ್ದು, ಯಂತ್ರವನ್ನು ಕಂಪಾನಿಯೋ ಸಂಸ್ಥೆಯು ತಯಾರಿಸುತ್ತಿದೆ. ಈ ಮೂಲಕ ಸಂಸ್ಥೆಯು ಸಂಘ-ಸಂಸ್ಥೆಗಳ ಸಹಕಾರದಲ್ಲಿ 12 ಲಕ್ಷಕ್ಕಿಂತ ಹೆಚ್ಚಿನ ಉಚಿತ ಥೆರಪಿ ಶಿಬಿರವನ್ನು ನಡೆಸಿದ್ದು, ದೇಶದಾದ್ಯಂತ 380 ಶಾಖೆಗಳನ್ನು ಹೊಂದಿದೆ ಎಂದರು.

ಕೊಡಗು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಎಂ.ಮುರಳೀಧರ್, ಗ್ರಾ.ಪಂ. ಸದಸ್ಯ ಎಸ್.ಎನ್.ರಘು, ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಆಹಮದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್‌ಕುಮಾರ್ ಮಾತನಾಡಿದರು.

ಮಾಜಿ ಗ್ರಾ.ಪಂ. ಅಧ್ಯಕ್ಷೆ ಸರೋಜಾ ಶೇಖರ್, ಹಿರಿಯ ಮುಖಂಡ ಕಳಲೆ ಕೃಷ್ಣೇಗೌಡ, ಕಂಪಾನಿಯೋ ಸಂಸ್ಥೆಯ ವಸಂತ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net