ಉಚಿತ ಪ್ರಯಾಣವಿಲ್ಲದೆ ಮಹಿಳೆಯರಿಗೆ ನಿರಾಸೆ

5-KGL-5,,,, )
Published on

ಕೊಳ್ಳೇಗಾಲ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಪಟ್ಟಣದಲ್ಲಿ ಮಂಗಳವಾರ ಬೆರಳಣಿಕೆ ಸಾರಿಗೆ ಬಸ್‌ಗಳು ಸಂಚರಿಸಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಖಾಸಗಿ ಬಸ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿತ್ತು.

ಎಂದಿನಂತೆ ಬೆಂಗಳೂರು, ಮೈಸೂರು, ಚಾಮರಾಜನಗರ, ಮಲೆ ಮಹದೇಶ್ವರ ಬೆಟ್ಟ, ಚಿಕ್ಕಲ್ಲೂರು, ಹೂಗ್ಯಂ ಸೇರಿದಂತೆ ವಿವಿಧೆಡೆ ತೆರಳಲು ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಪ್ರಯಾಣಿಕರು ಬೆಳ್ಳಂಬೆಳಗ್ಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಮುಷ್ಕರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಬೆರಳಣಿಕೆ ಬಸ್‌ಗಳು ಮಾತ್ರ ಸಂಚಾರ ಸೇವೆ ನೀಡುತ್ತಿದ್ದವು. ಉಳಿದ ಬಸ್‌ಗಳು ಪಟ್ಟಣದ ಡೀಪೋದಲ್ಲೇ ನಿಂತಿದ್ದವು.

ಕೆಲಸಕ್ಕೆ, ಶಾಲಾ-ಕಾಲೇಜುಗಳಿಗೆ ತೆರಳುವವರಿಗೆ ಇದರಿಂದ ಸಮಸ್ಯೆ ಉಂಟಾಯಿತು. ಇನ್ನು ಸಾರಿಗೆ ಬಸ್‌ನಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣವಿದ್ದರಿಂದ ಮಹಿಳೆಯರು ಸಾರಿಗೆ ಬಸ್‌ಗೆ ಕಾದು ಕೊನೆಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಿದರು.

ರಸ್ತೆಗಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಜನರಿಗೆ ತೊಂದರೆ ಉಂಟಾಯಿತು. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ತುಂಬಿ ತುಳುಕಿದರು. ಸಾರಿಗೆ ಬಸ್ ಓಡಿಸದೆ ಚಾಲಕರು ಹಾಗೂ ನಿರ್ವಾಹಕರು ಬಸ್‌ಗಳಲ್ಲಿಯೇ ಕಾಲ ಕಳೆದರು. ಮುಷ್ಕರ ಮಾಡುವ ನೌಕರರಿಂದ ಯಾವುದೇ ಅನಾಹುತ ಉಂಟಾಗದಂತೆ ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net