ಉಚಿತ ತರಬೇತಿಗೆ ಅರ್ಜಿ ಆಹ್ವಾನ

application
Published on

ಕಲಬುರಗಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿAದ ಜಿಲ್ಲೆಯ ಗ್ರಾಮೀಣ ಪ್ರದೇಶದವರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ನಗರದ ರಾಮಮಂದಿರ ಬಳಿಯ ಮಹಾದೇವಪ್ಪ ರಾಂಪುರೆ ಬಡಾವಣೆಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ತರಬೇತಿ ನಡೆಯಲಿದೆ. ಕುರಿ, ಆಡು ಸಾಕರಣಿಕೆ ತರಬೇತಿ ೧೦ ದಿನವಿದ್ದು, ಬ್ಯೂಟಿ ಪಾರ್ಲರ್ ನಿರ್ವಹಣೆ ೩೦ ದಿನವಿರಲಿದೆ. ಉಚಿತ ಊಟ, ವಸತಿ ಇದೆ. ಕನಿಷ್ಠ ಕನ್ನಡ ಓದಲು, ಬರೆಯಲು ಬರಬೇಕು. ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್, ನರೇಗಾ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿಗಳು ಅರ್ಜಿ ಸಲ್ಲಿಸಬಹುದು. ಕುರಿ, ಆಡು ಸಾಕಣೆಗೆ ಜು.೨೦ ಕೊನೇ ದಿನ, ಬ್ಯೂಟಿ ಪಾರ್ಲರ್ ನಿರ್ವಹಣೆಗೆ ಆ.೯ ಕೊನೇ ದಿನವಾಗಿದೆ. ಮಾಹಿತಿಗೆ ಕಚೇರಿಗೆ ಅಥವಾ ೯೪೪೮೯೯೪೫೮೫, ೯೯೦೦೧೩೫೭೦೫, ೯೮೮೬೭೮೧೨೩೯ ಸಂಖ್ಯೆಗೆ ಸಂಪರ್ಕಿಸಿ ಎಂದು ಸಂಸ್ಥೆ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net