ಉಚಿತ ತರಬೇತಿಗೆ ಅರ್ಜಿ

Published on

ಚಾಮರಾಜನಗರ: ಎಸ್.ಬಿ.ಐ. ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗೆ ಊಟ-ವಸತಿಗಳೊಂದಿಗೆ ಸಿಸಿಟಿವಿ ರಿಪೇರಿ, ಸೇವೆ ತರಬೇತಿ ಹಾಗೂ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ (ಕೃಷಿ ಉದ್ಯಮಿ) ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೆ.17 ರಿಂದ ಸಿಸಿಟಿವಿ ರಿಪೇರಿ, ಸೇವೆ ತರಬೇತಿ ಹಾಗೂ ಸೆ.18 ರಿಂದ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ (ಕೃಷಿ ಉದ್ಯಮಿ) ತರಬೇತಿಯು ಪ್ರಾರಂಭವಾಗಲಿದ್ದು, 13 ದಿನಗಳು ತರಬೇತಿ ನೀಡಲಾಗುತ್ತದೆ. 18 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ನಕಲು ಪ್ರತಿ ಮತ್ತು 4 ಭಾವಚಿತ್ರಗಳನ್ನು ಸಲ್ಲಿಸಬೇಕು. ತರಬೇತಿಯನ್ನು ಮಾದಾಪುರದ ಸಂತೆಮರಳ್ಳಿ ರಸ್ತೆಯ ಪೆಟ್ರೋಲ್ ಬಂಕ್ ಎದುರಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಟ್ಟಡದಲ್ಲಿರುವ ಎಸ್.ಬಿ.ಐ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಎಸ್.ಬಿ.ಐ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net