ಉಚಿತ ಟ್ಯೂಷನ್ ಸದುಪಯೋಗ ಮಾಡಿಕೊಳ್ಳಲಿ

19kkr1
Published on

ಕಕ್ಕೇರಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸದುದ್ದೇಶದಿಂದ ಧರ್ಮಸ್ಥಳ ಸಂಸ್ಥೆ ಉಚಿತ ಟ್ಯೂಷನ್ ಆರಂಭಿಸಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೇಲ್ವಿಚಾರಕ ಮಂಜುನಾಥ ಎಚ್. ಹೇಳಿದರು.

ಸಮೀಪದ ಲಿಂಗನಮಠ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ೩ ತಿಂಗಳ ಉಚಿತ ಟ್ಯೂಷನ್ ಕ್ಲಾಸ್‌ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವೈದ್ಯಾಧಿಕಾರಿ ಕೆ.ಬಿ.ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಅವಕಾಶಗಳ ಪ್ರಯೋಜನ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಟ್ಯೂಷನ್ ಕ್ಲಾಸ್ ವತಿಯಿಂದ ಹಮ್ಮಿಕೊಂಡಿದ್ದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಚನ್ನಬಸಪ್ಪ ಪಾಟೀಲ, ತವನಪ್ಪ ಪಾಟೀಲ, ಒಕ್ಕೂಟದ ಅಧ್ಯಕ್ಷೆ ಅನ್ನಪೂರ್ಣಾ ಬಾಗೇವಾಡಿ, ಸರೋಜಾ ಬಾಗೇವಾಡಿ, ಮಹೇಶ್ವರಿ ಮಾಟೋಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net