ಚಾಮರಾಜನಗರ: ಎಸ್.ಬಿ.ಐ. ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಿಂದ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತವಾಗಿ ವಸ್ತುಚಿತ್ರ ಕಲಾ ಉದ್ಯಮಿ (ಎಂಬ್ರಾಯಿಡಿಂಗ್) ತರಬೇತಿ ಆರಂಭಿಸಲಾಗಿದೆ. ತರಬೇತಿಗೆ ಬರುವವರು ಆಧಾರ್ ಕಾರ್ಡ್, ಪಡಿತರ ಚೀಟಿಯ ನಕಲು ಪ್ರತಿ ಹಾಗೂ 4 ಭಾವಚಿತ್ರ ತರಬೇಕು. ಸಂತೇಮರಹಳ್ಳಿಯ ರಸ್ತೆಯಲ್ಲಿರುವ ಮಾದಪುರ ಬಳಿಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಟ್ಟಡದಲ್ಲಿರುವ ಎಸ್.ಬಿ.ಐ. ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.9606098878, 8722483393, 9739067155, 8088066890 ಸಂಪರ್ಕಿಸಬಹುದು ಎಂದು ಎಸ್‌ಬಿಐ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.