ಉಚಿತ ಆರೋಗ್ಯ ಶಿಬಿರ ಜನರಿಗೆ ಅನುಕೂಲ

1
Published on

ಸವದತ್ತಿ: ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಹೆಚ್ಚಾಗಿ ನಡೆಯುವುದರಿಂದ ಜನಸಾಮಾನ್ಯ ರಿಗೆ ಉಪಯೋಗವಾಗಲಿದೆ ಎಂದು ೇತ್ರ ಶಿಣಾಧಿಕಾರಿ ಮೋಹನ ದಂಡಿನ ಹೇಳಿದರು.

ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನ ಹತ್ತಿರದ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಶರಣ ಸಂಗಮದ ವತಿಯಿಂದ ಮನೆ ಮನೆಗೆ ಬಸವ ಜ್ಯೋತಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮಕ್ಕೆ ಇಲಾಖೆಯಿಂದ ಸಹಕಾರ ನೀಡಲಾಗುವುದು ಎಂದರು.

ಪ್ರಾಧ್ಯಾಪಕ ಸುನಂದಾ ಹಟ್ಟಿ ಮಾತನಾಡಿ, ಇಂದಿನ ದಿನಗಳಲ್ಲಿ ಆರೋಗ್ಯದ ಕಾಳಜಿ ಬಹುಮುಖ್ಯವಾಗಿದೆ ಎಂದರು. ವೆದ್ಯರಾದ ಡಾ. ಸುಧಾ ಹಳೇಮನಿ, ಡಾ. ಮಂಜುಳಾ, ಡಾ.ಪ್ರಕಾಶ ನಿಡವಣಿ ದಂಪತಿ ಮತ್ತು ಡಾ. ರಶ್ಮಿ, ಡಾ.ಸೋಮಶೇಖರ ದಂಪತಿ, ಡಾ. ಸುನೀಲ ಮುಂಗರಾವಡಿ ಸಹೋದರರು ವೈದ್ಯಕಿಯ ಸೇವೆ ಸಲ್ಲಿಸಿದರು. ಶರಣ ಸಂಗಮದ ವತಿಯಿಂದ ವೆದ್ಯರು ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು. ಬಣಜಿಗ ಸಂದ ಅಧ್ಯ ಪ್ರವಿಣ ಪಟ್ಟಣಶೆಟ್ಟಿ, ಬಸವರಾಜ ಕಪ್ಪನ್ನವರ, ಬಸವರಾಜ ಪುಟ್ಟಿ, ರಾಜಶೇಖರ ನಿಡವಣಿ, ಬಸಣ್ಣ ಬೆಳವಡಿ, ಕಸ್ತೂರಿ ಹೂಲಿ, ಗೀತಾ ಭಂಡಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net