ಉಚಿತ ಆರೋಗ್ಯ ತಪಾಸಣೆ ಶಿಬಿರ ನಾಳೆ

hanumayy belur
Published on

ಕಲಬುರಗಿ: ಆರ್ಯ ವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘದಿAದ ನೆಹರು ಗಂಜ್‌ನ ಶ್ರೀ ನಗರೇಶ್ವರ ಶಾಲೆಯಲ್ಲಿ ಭಾನುವಾರ ಬೆಳಗ್ಗೆ ೯.೩೦ರಿಂದ ಮಧ್ಯಾಹ್ನ ೧.೩೦ರವರೆಗೆ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಹನಮಯ್ಯ ಬೇಲೂರ ತಿಳಿಸಿದರು. ಹೈದರಾಬಾದ್‌ನ ಯಶೋದಾ, ಕಲಬುರಗಿಯ ಬಿಲ್ವಾ, ಆದಿತ್ಯ ಮಲ್ಟಿ ಸ್ಪೆಷಾಲಿಟಿ, ಚನ್ನಪ್ಪ ಕಿವಿ, ಮೂಗು, ಗಂಟಲು ಆಸ್ಪತ್ರೆ, ಅನುಗ್ರಹ ಕಣ್ಣಿನ ಆಸ್ಪತ್ರೆ, ಇಟಗಂಪಲ್ಲಿ ತಾಯಿ ಮತ್ತು ಮಗು ಕಾಳಜಿ ಕೇಂದ್ರ, ಶರಣ ಆಸ್ಪತ್ರೆ, ಪಿ.ಎಸ್. ರಾವ್ ಮೂಲವ್ಯಾಧಿ, ಮಂದಕನಳ್ಳಿ ಆಸ್ಪತ್ರೆ, ಕೊಠಾರಿ ಹಲ್ಲಿನ ಮತ್ತು ನಾಟಿ ಆಸ್ಪತ್ರೆಗಳ ಸಹಯೋಗದಡಿ ಶಿಬಿರ ನಡೆಯಲಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಖ್ಯಾತ ವೈದ್ಯರು ಉಚಿತ ತಪಾಸಣೆ ನಡೆಸಿ ಸಲಹೆ ನೀಡಲಿದ್ದಾರೆ. ಗಂಗಾ ಡಿಸ್ಟಿçಬ್ಯೂಟರ್ಸ್ ಸಹಯೋಗದಡಿ ಔಷಧ ನೀಡಲಾಗುತ್ತದೆ. ಮಂಜುಳಾ ಮತ್ತು ಸಂಜೀವ ಗುಪ್ತಾ ಸಹಯೋಗ ನೀಡಿದ್ದಾರೆ ಎಂದರು. ರಾಘವೇಂದ್ರ ಗುಪ್ತಾ, ಡಾ.ಎನ್.ಜಿ. ಶ್ರೀಧರ, ಡಾ.ವಿದ್ಯಾಸಾಗರ ಇಟಗಂಪಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net